ಮನೆ ರಾಜ್ಯ ಕಾನೂನು ತಜ್ಞರೊಂದಿಗೆ ಚರ್ಚಿಸಿ ಹಾಲುಮತ ಸಮಾಜವನ್ನು ಎಸ್.ಟಿ ಗೆ ಸೇರಿಸಲು ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ

ಕಾನೂನು ತಜ್ಞರೊಂದಿಗೆ ಚರ್ಚಿಸಿ ಹಾಲುಮತ ಸಮಾಜವನ್ನು ಎಸ್.ಟಿ ಗೆ ಸೇರಿಸಲು ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ

0

ವಿಜಯನಗರ: ಹಾಲುಮತ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ವರದಿ ನನ್ನ ಕೈಸೇರಿದ ನಂತರ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ 10 ಕೋಟಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ನಿರ್ಮಿಸಿದ ಏಳುಕೋಟಿ ವಸತಿ ನಿಲಯ ಉದ್ಘಾಟಿಸಿದ ನಂತರ ಮಾತನಾಡಿದರು.

ಕುಲಶಾಸ್ತ್ರೀಯ ಅಧ್ಯಯನ ಅಂತಿಮ ಹಂತದಲ್ಲಿದೆ. ಕೆಲವು ಸಣ್ಣಪುಟ್ಟ ತಿದ್ದುಪಡಿ ಆದ ನಂತರ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಎರಡು ಸಲ ವರದಿ ಕಳಿಸಿದಾಗ ಕೇಂದ್ರದಿಂದ ವಾಪಸ್ ಬಂದಿತ್ತು. ಈ ಸಲ ಬಹಳ ಕಾಳಜಿ ವಹಿಸಿ ಸರ್ಕಾರ ಅದರ ಮೇಲೆ ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಮೈಲಾರದಲ್ಲಿ‌ ಸಮುದಾಯ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಕೊಡಲು ತೀರ್ಮಾನ ತೆಗೆದುಕೊಂಡಿರುವೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ಕೊಟ್ಟು ಕಾಗಿನೆಲೆ, ಬಾಡ ಕ್ಷೇತ್ರ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕನಕದಾಸರು, ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದು ನಮ್ಮ ಸರ್ಕಾರ. ಜನರಿಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಮಠಗಳಿಗೆ ನಮ್ಮ ಸರ್ಕಾರ ಅನುದಾನ ಕೊಡುವ ಕೆಲಸ ಮಾಡಿದೆ ಎಂದರು.

ಕಳೆದ ಬಜೆಟ್ ನಲ್ಲಿ ಕುರಿಗಾಹಿಗಳಿಗೆ ನೆರವು ಕಲ್ಪಿಸುವ ಯೋಜನೆ ಘೋಷಿಸಲಾಗಿತ್ತು. ಅದು ಶೀಘ್ರ ಜಾರಿಗೆ ಬರಲಿದೆ. 20 ಕುರಿ, ಮೇಕೆ ಕೊಡುವ ಕಾರ್ಯಕ್ರಮ ಕುರಿಗಾಹಿ ಸಂಘಗಳ ಮೂಲಕ ವಿತರಿಸುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು. ಎಲ್ಲ ದುಡಿಯುವ ವರ್ಗದ ಜನರ ಅಭಿವೃದ್ಧಿ ನಮ್ಮ ಗುರಿ. ದುಡಿಮೆಯೇ ದೊಡ್ಡಪ್ಪ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.

ಹಿಂದಿನ ಲೇಖನಎಚ್’ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ: ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ನಿಗದಿಯ ಎಚ್ಚರಿಕೆ ನೀಡಿದ ಹೈಕೋರ್ಟ್
ಮುಂದಿನ ಲೇಖನಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ