ಮನೆ ಜ್ಯೋತಿಷ್ಯ ಪುಷ್ಯ ಜಾತಕನ ರೋಗ

ಪುಷ್ಯ ಜಾತಕನ ರೋಗ

0

     ಕ್ಷಯ ಜೀರ್ಣಕ ಹುಣ್ಣು,  ಶ್ವಾಸನಾಳದ ಹುಣ್ಣು,ವಾಯು, ಜೀರ್ಣಾಕ ಹುಣ್ಣು, ಪಿತ್ತ ಅಶ್ವರಿ,ಜಿಗುಪ್ಸೆ,ವಾಂತಿ, ಬೇಸರ, ಓಕರಿಕೆ,ಹೀನತೆ, ತೇಗು, ಬಿಕ್ಕು,ಅವರೋಧನ, ಹೊಟ್ಟೆಯ ಮೇಲೆ ಗಂಟು, ಕೊಬ್ಬು, ಕ್ಯಾನ್ಸರ್, ರಾಜಯಕ್ಷ್ಮಾ, ತಪೋದಿಕ, ಕಾಮಾಲೆ ಒಣಕೆಮ್ಮು, ಎಗ್ಜಿಮಾ, ಪಯೋರಿಯಾ .

Join Our Whatsapp Group

 ವಿಶೇಷ :

        ಶನಿ ನಕ್ಷತ್ರ ಚಂದ್ರನ ರಾಶಿಯಲ್ಲಿ ಜನಿಸಿದ ಇಂತಹ ಜಾತಕರು ಅಧಿಕಾಂಶ ದೊಡ್ಡ ಕುಟುಂಬದವರು ಮತ್ತು ಅನೇಕ ಸೂತ್ರಗಳಿಂದ ಯುಕ್ತರಾಗಿರುತ್ತಾರೆ. ಇವರ ಮನಸ್ಸು ಅಸ್ಥಿರವಾಗಿರುತ್ತದೆ. ಆದ್ದರಿಂದ ಭ್ರಮಣದಲ್ಲಿ ವಿಶೇಷ ಇಚ್ಛೆಯನ್ನು ಹೊಂದಿರುತ್ತಾರೆ.ಈ ಜಾತಕರು ಅನಾರೋಗ್ಯವನ್ನು ಮತ್ತು ಕಠಿಣ ಕಾರ್ಯಗಳನ್ನು ಚತುರತೆಯಿಂದ ನಿರ್ವಹಿಸಲು ಕುಶಲರಾಗಿರುತ್ತಾರೆ. ಮಶಿನರಿ ಅಥವಾ ಅರೆತಾಂತ್ರಿಕ ವ್ಯಾಪಾರದಲ್ಲಿ ತೊಡಗುತ್ತಾರೆ. ಅಧಿಕಾರದಲ್ಲಿರುವ ವ್ಯಕ್ತಿಗಳ ಸಂಪರ್ಕ ಹೊಂದುತ್ತಾರೆ. ಇವರಿಗೆ ಶಿವಭಕ್ತರ ಸಂಜ್ಞೆಯನ್ನು ನೀಡಬಹುದು.ಮಶಿನರಿ ಇತ್ಯಾದಿಗಳಿಂದ ಇವರಿಗೆ ವ್ಯಾಪಾರದಲ್ಲಿ ಲಾಭವಾಗುತ್ತದೆ.ಶನಿಯ ಪ್ರಭಾವ ಮನಸ್ಸಿನ ಮೇಲಿರುವ ಕಾರಣ,ಇವರು ಹೆಜ್ಜೆ ಹೆಜ್ಞೆಗೂ ಮಿತ್ರರನ್ನು ವಿರೋಧಿಸುವ ಪ್ರವೃತ್ತಿಗೆ ಗುರಿಯಾಗುತ್ತಾರೆ. ಆದಾಗ್ಯೂ ಮಿತ್ರರ ಹಿತದ ಕುರಿತು ಇವರಲ್ಲಿ ಸದಾ ಜಾಗೃತೆ ಇರುತ್ತದೆ. ವ್ಯಾಪಾರ ಬುದ್ಧಿಯ ಈ ಜಾತಕರು ಸಂಬಂಧಿ ಮುಂತಾದವರೊಡನೆ ಪ್ರೇಮದ ಭಾವನೆ ಹೊಂದಿರುತ್ತಾರೆ; ಆದರೆ, ಸದಾ ಮಾನಸಿಕವಾಗಿ ಅಸ್ವಸ್ಥರಾಗಿರುತ್ತಾರೆ. ಸಾಧಾರಣ ವಿಷಯಕ್ಕೂ ಚಿಂತಾಗ್ರಸ್ತರಾಗುವ ಇವರು ಭಯಾನಕ ಪರಿಸ್ಥಿತಿಯಲ್ಲಿ ಸಾಹಸವನ್ನು ತೋರುವುದಿಲ್ಲ ಮತ್ತು ಪ್ರೇರಣೆಯನ್ನು ಪ್ರಾಪ್ತಿ ಹೊಂದಿದಾಗ ಉನ್ನತ ಪದವಿಯವರೆಗೆ ತಲಪಲು ಸಾಮರ್ಥ್ಯರಾಗುತ್ತಾರೆ. ಇವರ ಆರ್ಥಿಕ ಸ್ಥಿತಿ ಸುಧಾರಣಾವಾಗಿರುತ್ತದೆ, ಭಗವದ್ಭಕ್ತ  ಮತ್ತು ತತ್ವಜ್ಞಾನದ ವಿಚಾರಧಾರೆ ಯುಳ್ಳ ಅಧಿಕಾಂಶ ಪುಷ್ಯ ನಕ್ಷತ್ರದ ಜಾತಕರು ದೀರ್ಘಾಯಸ್ಸುನ್ನು ಭೋಗಿಸುತ್ತಾರೆ ಮತ್ತು ಪ್ರಾಪಂಚಿಕ ಕಾರ್ಯಗಳಲ್ಲಿ ಸಫಲರೂ ಆಗುತ್ತಾರೆ. ಸೂರ್ಯನು ಈ ನಕ್ಷತ್ರದ ಮೇಲೆ ಪ್ರತಿವರ್ಷ ಮಧ್ಯ ಶ್ರಾವಣದವರೆಗೆ ವಿದ್ಯಾಮಾನನಾಗಿರುತ್ತಾನೆ.ಚಂದ್ರನು ಪ್ರತಿ 27ನೆಯ ದಿನ ಒಂದು ದಿನಾಕ್ಕಾಗಿ ಈ ನಕ್ಷತ್ರ ಮೇಲಿರುತ್ತಾನೆ. ಶನಿಯು ಈ ನಕ್ಷತ್ರದ ಮೇಲೆ ಭ್ರಮಣಿಸುವಾಗ,ಜಾತಕನಿಗೆ ನೌಕರಿ ಅಥವಾ ಸಂಪತ್ತಿನ ಮೂಲಕ ವ್ಯಾಪಾರ ವೃತ್ತಿಯ ಮೂಲಕ ವಿಶೇಷ ಲಾಭ ಪ್ರಾಪ್ತಿಯಾಗುತ್ತದೆ.

 ಚರಣದ ಸ್ವಾಮಿ ಫಲ :

      ★ ಪ್ರಥಮ ಚರಣದ ಸ್ವಾಮಿ ಶನಿ ಸೂರ್ಯ ಮಾನಸಿಕವಾಗಿ ಜಾತಕನನ್ನು ಅಧಿಕ ಅಸ್ಥಿರಗೊಳಿಸುತ್ತಾನೆ.

      ★  ದ್ವಿತೀಯ ಚರಣದ ಸ್ವಾಮಿ ಶನಿ,ಬುಧ ಭಾವನಾತ್ಮಕತೆಯನ್ನು ಕಡಿಮೆ ಮಾಡಿ, ಗಂಭೀರತೆ ಮತ್ತು ಬೌತಿಕತೆಯನ್ನು ಪ್ರಾದಾನಿಸುತ್ತಾರೆ.

      ★ತೃತೀಯ ಚರಣದ ಸ್ವಾಮಿ ಶನಿ ಶುಕ್ರ ಜಾತಕನನ್ನು ಅಧಿಕ ಸಮತೋಲಿತನನ್ನಾಗಿ ಮಾಡುತ್ತಾರೆ .

     ★  ಚತುರ್ಥ ಚರಣದ ಸ್ವಾಮಿ ಶನಿ ಮಂಗಳ ಜಾತಕನಲ್ಲಿ ಆ ವೇಗವನ್ನು ವೃದ್ಧಿ ಮಾಡುತ್ತಾರೆ.