ಮನೆ ಆರೋಗ್ಯ ಕೋವಿಡ್ ​ಗಿಂತ 20 ಪಟ್ಟು ಮಾರಕವಾಗಿರಲಿದೆ ಡಿಸೀಸ್ ಎಕ್ಸ್​: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೋವಿಡ್ ​ಗಿಂತ 20 ಪಟ್ಟು ಮಾರಕವಾಗಿರಲಿದೆ ಡಿಸೀಸ್ ಎಕ್ಸ್​: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

0

ಜಗತ್ತಿಗೆ ಮತ್ತೊಮ್ಮೆ ಸಾಂಕ್ರಾಮಿಕದ ಆತಂಕ ತಂದಿರುವ ಡಿಸೀಸ್ ಎಕ್ಸ್​ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ , ಈ ಹೊಸ ಸೋಂಕನ್ನು ಎದುರಿಸಲು ಎಲ್ಲ ದೇಶಗಳು ಒಗ್ಗೂಡಬೇಕು. ಮೇ ವೇಳೆಗೆ ಈ ಹೊಸ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡುವ ಸಾಧ್ಯತೆಯಿದೆ ಎಂದಿದ್ದಾರೆ. ಡಿಸೀಸ್ ಎಕ್ಸ್​ ಎಂಬುದು ಇನ್ನೂ ಗುರುತಿಸದ ಒಂದು ರೋಗವಾಗಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಅಜ್ಞಾತ ಅಥವಾ ಹೊಸದಾಗಿ ಹೊರಹೊಮ್ಮುತ್ತಿರುವ ಸಾಂಕ್ರಾಮಿಕ ಕಾಯಿಲೆಗೆ ಪ್ಲೇಸ್‌ ಹೋಲ್ಡರ್ ಆಗಿದೆ.

ಈ ಹಿಂದೆ ಕೊವಿಡ್ ಸೋಂಕು ಎದುರಾದಾಗ ಕೂಡ ಅದಕ್ಕೆ ಇದೇ ಹೆಸರನ್ನು ನೀಡಲಾಗಿತ್ತು. ಬಳಿಕ ಅದಕ್ಕೆ ಕೊರೊನಾವೈರಸ್ ಎಂದು ನಾಮಕರಣ ಮಾಡಲಾಯಿತು. ಆಗ ಕೊವಿಡ್ ಅನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣದಿಂದ ಅನೇಕ ಜನರು ಪ್ರಾಣ ಕಳೆದುಕೊಂಡರು. ಆಗ ಸಾಕಷ್ಟು ಆಕ್ಸಿಜನ್, ಆಸ್ಪತ್ರೆಯಲ್ಲಿ ಸ್ಥಳಾವಕಾಶ ಇರಲಿಲ್ಲ. ಹೀಗಾಗಿ, ಈ ಬಾರಿ ಸೋಂಕು ಹರಡುವ ಮೊದಲೇ ಎಚ್ಚೆತ್ತುಕೊಂಡು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.

ಡಿಸೀಸ್ ಎಕ್ಸ್ ಎಂದರೇನು?

2019ರಲ್ಲಿ ಚೀನಾದ ವುಹಾನ್ ನಗರದಿಂದ ಕೊವಿಡ್-19ಗೆ ಕಾರಣವಾಗುವ SARS-CoV-19 ಹರಡಲು ಪ್ರಾರಂಭಿಸಿದ್ದು ನೆನಪಿರಬಹುದು. ಅದೇ ರೀತಿ ತೀವ್ರವಾದ ಜಾಗತಿಕ ಆರೋಗ್ಯ ಆತಂಕವನ್ನು ಉಂಟುಮಾಡುವ ಭವಿಷ್ಯದ ಮತ್ತು ಅಜ್ಞಾತ ರೋಗಕಾರಕದ ಸಾಧ್ಯತೆಯನ್ನು ಈ ಡಿಸೀಸ್ ಎಕ್ಸ್​ ಸೂಚಿಸುತ್ತದೆ.

ತಜ್ಞರ ಪ್ರಕಾರ, ಕೊವಿಡ್ ಸೋಂಕನ್ನು ಹರಡುವ ವೈರಸ್ ವಿಶ್ವಾದ್ಯಂತ ಸಮುದಾಯಗಳ ಮೇಲೆ ಇನ್ನೂ ಹಾನಿಯನ್ನುಂಟುಮಾಡುತ್ತಿದೆ. ಡಿಸೀಸ್ ಎಕ್ಸ್​ ಎಂಬುದು ಅಮೂರ್ತ ಪರಿಕಲ್ಪನೆಯಂತೆ ಕಾಣಿಸಬಹುದು. ಆದರೆ, ಡಿಸೀಸ್ X ಯಾವುದೇ ಸಂಭಾವ್ಯ ಆರೋಗ್ಯ ಬಿಕ್ಕಟ್ಟುಗಳಿಗೆ ತಯಾರಿ ಮಾಡಲು ಕಾರ್ಯನಿರ್ವಹಿಸುತ್ತದೆ.

ಹಿಂದಿನ ಲೇಖನಬಿಬಿಎಂಪಿ ಮತದಾರರ ಪರಿಷ್ಕರಣೆ ಪಟ್ಟಿ ಪ್ರಕಟ
ಮುಂದಿನ ಲೇಖನರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಕೋಟಿ ಕೋಟಿ ರಾಮಭಕ್ತರ ಆಸೆ ಈಡೇರಿಕೆ- ಬಿ.ವೈ ವಿಜಯೇಂದ್ರ