ಮನೆ ರಾಜ್ಯ ಆದೇಶ ಧಿಕ್ಕರಿಸಿ ನೀರು ನಿಲ್ಲಿಸಿ: ಮಾಜಿ ಸಚಿವ ಸಿ ಎಸ್ ಪುಟ್ಟರಾಜು

ಆದೇಶ ಧಿಕ್ಕರಿಸಿ ನೀರು ನಿಲ್ಲಿಸಿ: ಮಾಜಿ ಸಚಿವ ಸಿ ಎಸ್ ಪುಟ್ಟರಾಜು

0

ಮಂಡ್ಯ: ಮತ್ತೆ ತಮಿಳುನಾಡಿಗೆ ಕಾವೇರಿ ನೀರು CWRC ಸೂಚನೆ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರಿದಿದ್ದು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಸಲಾಗಿದೆ.

Join Our Whatsapp Group

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ತೆಂಗಿನಚಿಪ್ಪು ಹಿಡಿದು, ಕಿವಿಗೆ ಹೂವು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗಿದೆ.

ರಾಜ್ಯ ಸರ್ಕಾರ ರೈತರ ಕಿವಿ ಹೂವು ಇಟ್ಟಿದೆ, ಕೈ ಚಿಪ್ಪು ಕೊಟ್ಟಿದೆ. ರೈತರ ಬದುಕನ್ನು ಬೀದಿಗೆ ರಾಜ್ಯ ಸರ್ಕಾರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ತಕ್ಷಣವೇ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಆದೇಶ ಧಿಕ್ಕರಿಸಿ ನೀರು ನಿಲ್ಲಿಸಿ: ಮಾಜಿ ಸಚಿವ ಸಿ ಎಸ್ ಪುಟ್ಟರಾಜು

ಆದೇಶ ಧಿಕ್ಕರಿಸಿ ನೀರು ನಿಲ್ಲಿಸಿ, ನಿಮ್ಮ ಜೊತೆ ನಾವಿದ್ದೇವೆ ಮಂಡ್ಯ ಜನರು ನಿಮ್ಮ ಜೊತೆ ನಿಲ್ತಾರೆ ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಹೇಳಿದರು.

ಕಾವೇರಿ ಪ್ರಾಧಿಕಾರ ಬರೆಯ ಮೇಲೆ ಬರೆ ಹಾಕ್ತಿದೆ. ನಮ್ಮ ಜಿಲ್ಲೆಯ ರೈತರನ್ನ ಪ್ರಾಧಿಕಾರ ಕೆಣಕುತ್ತಿದೆ. ಚಳವಳಿಯನ್ನ ತೀವ್ರಗೊಳಿಸಲು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ ಎಂದರು.

ಹಾಲಿ ಶಾಸಕರು ಸ್ಪಂದಿಸುವ ಕೆಲಸ ಆಗ್ತಿಲ್ಲ. ಮಾಜಿ ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಚಳವಳಿ ಮುಂದುವರೆಯುತ್ತೆ. ನ್ಯಾಯಕ್ಕಾಗಿ ಹೋರಾಟ ಮಾಡಲೇ ಬೇಕು. ಯಾವ ನ್ಯಾಯ ಮಂಡಲಿ, ಪ್ರಾಧಿಕಾರದಿಂದ ಸಿಗಲ್ಲ. ಯಾವ ಸರ್ಕಾರ ಕೂಡ ನ್ಯಾಯ ಕೊಡಿಸಲ್ಲ ಎಂದರು.

ಪ್ರಾಧಿಕಾರ ಸೂಚನೆ ಕೊಡದಿದ್ದರು ಆಗಲೇ ಗೇಟ್ ತೆಗೆದು ನೀರು ಬಿಡಲು ನಿಂತಿರುತ್ತಾರೆ. ಆದೇಶ ಬಂದ ಒಂದು ಗಂಟೆಯಲ್ಲಿ ನೀರು ಹೆಚ್ಚಾಗಿದೆ. ನಮ್ಮ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದರಲ್ಲಿ ಉತ್ಸಾಹಕರರಿದ್ದಾರೆ. ಅವಿವೇಕತನ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು.

ತಕ್ಷಣವೇ ನೀರು ನಿಲ್ಲಿಸಿ, ಆದೇಶ ದಿಕ್ಕರಿಸಿ ನಾವು ನಿಮ್ಮ ಜೊತೆ ಇದ್ದೇವೆ. ನಮ್ಮ ಮಂಡ್ಯ ಜನರು ನಿಮ್ಮ ಜೊತೆ ನಿಲ್ತಾರೆ. ಕುಡಿಯುವುದಕ್ಕಾದ್ರು ನೀರು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಮಾಜಿ ಶಾಸಕ ಜಿಬಿ ಶಿವಕುಮಾರ್, ಸೇರಿ ಹಲವರು ಭಾಗಿಯಾಗಿದ್ದರು.