ಮನೆ ಸುದ್ದಿ ಜಾಲ ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರಿಗೆ ‘ಡಿಸ್ ಪ್ಲೇ ಕಾರ್ಡ್’ ವಿತರಣೆ

ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರಿಗೆ ‘ಡಿಸ್ ಪ್ಲೇ ಕಾರ್ಡ್’ ವಿತರಣೆ

0

ಮೈಸೂರು(Mysuru): ಪ್ರವಾಸಿಗರು, ಪ್ರಯಾಣಿಕರ ಸುರಕ್ಷತೆಗಾಗಿ ಆಟೋ ಚಾಲಕರಿಗೆ ಡಿಸ್ ಪ್ಲೇ ಕಾರ್ಡ್ ನ್ನು ನಗರ ಪೊಲೀಸ್ ಆಯುಕ್ತ(city Police Commissioner) ಡಾ.ಚಂದ್ರಗುಪ್ತ (Dr.Chandragupta) ವಿತರಿಸಿದರು.

ಮೈಸೂರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆಟೋಗಳಿಗೆ  ಡಿಸ್ ಪ್ಲೇ ಕಾರ್ಡ್ ಅಳವಡಿಕೆ ಮಾಡಲಾಗುತ್ತಿದೆ.

ಈ ಡಿಸ್ ಪ್ಲೇ ಕಾರ್ಡ್ ನಲ್ಲಿ ಅಟೋ ಚಾಲಕರ ಸಂಪೂರ್ಣ ಮಾಹಿತಿ ಹೊಂದಿರುತ್ತದೆ. ಒಂದೇ ಸ್ಕ್ಯಾನ್ ನಲ್ಲಿ ಅಟೋ ಡ್ರೈವರ್ ನ ಸಂಪೂರ್ಣ ವಿವರ ಲಭ್ಯವಾಗುತ್ತದೆ. ಈ ಡಿಸ್ ಪ್ಲೇ ಕಾರ್ಟ್ ಅಳವಡಿಕೆಯಿಂದಾಗಿ ಪೊಲೀಸರ ಮಾಹಿತಿಗೂ ಸಹಕಾರ ಆಗಲಿದೆ.

ಪ್ರಯಾಣಿಕರು, ಪ್ರವಾಸಿಗರ ಹಿತದೃಷ್ಟಿಯಿಂದಾಗಿ  ಮೈಸೂರಿನ 28ಸಾವಿರ ಆಟೋಗಳಿಗೂ ಈ ಡಿಸ್ ಪ್ಲೇ ಕಾರ್ಡ್ ಅಳವಡಿಕೆ ಕಡ್ಡಾಯ. ಪ್ರತಿಯೊಬ್ಬ ಆಟೋ ಚಾಲಕರೂ ಕಾರ್ಡ್ ಅಳವಡಿಸುವಂತೆ ಸೂಚನೆ ನಗರ ಪೊಲೀಸ್ ಅಯುಕ್ತ ಡಾ.ಚಂದ್ರಗುಪ್ತ ಸೂಚಿಸಿದರು.

ಹಿಂದಿನ ಲೇಖನಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚಲು ಹೈಕೋರ್ಟ್‌ ಆದೇಶ
ಮುಂದಿನ ಲೇಖನಕಡ್ಡಾಯವಾಗಿ ಲಸಿಕೆ ಪಡೆಯಿರಿ: ಸಚಿವ ಡಾ.ಕೆ.ಸುಧಾಕರ್