ಮನೆ ಅಪರಾಧ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಕೀಲೆಯನ್ನು ವಿವಸ್ತ್ರಗೊಳಿಸಿ ಬ್ಲಾಕ್ ಮೇಲ್: 10 ಲಕ್ಷ ರೂ ವಂಚನೆ- ದೂರು...

ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಕೀಲೆಯನ್ನು ವಿವಸ್ತ್ರಗೊಳಿಸಿ ಬ್ಲಾಕ್ ಮೇಲ್: 10 ಲಕ್ಷ ರೂ ವಂಚನೆ- ದೂರು ದಾಖಲು

0

ಬೆಂಗಳೂರು: ತನಗೆ ಜನರ ಗುಂಪೊಂದು ವಿಡಿಯೋ ಕಾಲ್‌ ನಲ್ಲಿ ಬಟ್ಟೆ ಬಿಚ್ಚಲು ಹೇಳಿ 10 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ನಗರದ ವಕೀಲೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

Join Our Whatsapp Group

ದೂರಿನಲ್ಲಿ, ವಕೀಲರಾಗಿರುವ ಮಹಿಳೆ, ಏಪ್ರಿಲ್ 5 ರಂದು ಮುಂಬೈನಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ನನ್ನನ್ನು ಸಂಪರ್ಕಿಸಿ ನನ್ನ ಹೆಸರಿನಲ್ಲಿ ಡ್ರಗ್ಸ್ ಪ್ಯಾಕೇಜ್ ಸಿಂಗಾಪುರದಿಂದ ರವಾನೆಯಾಗುತ್ತಿದೆ ಎಂದು ಹೇಳಿದ್ದಾರೆ. ಮಾದಕ ವಸ್ತು ಪರೀಕ್ಷೆಗಾಗಿ ವೀಡಿಯೊ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಹೇಳಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎರಡು ದಿನಗಳ ಕಾಲ ಮುಂದುವರೆದಿದ್ದು, ನಂತರ ವಂಚಕರು ಆಕೆಗೆ ಬ್ಲ್ಯಾಕ್‌ ಮೇಲ್ ಮಾಡಲು ಪ್ರಾರಂಭಿಸಿದ್ದು, ತಮ್ಮ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾಯಿಸದಿದ್ದರೆ ವಿಡಿಯೋವನ್ನು ಆನ್‌ಲೈನ್‌ ನಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಗಾಬರಿಗೊಂಡ ವಕೀಲೆ ಹೇಳಿದ ಮೊತ್ತವನ್ನು ಖಾತೆಗೆ ವರ್ಗಾಯಿಸಿದ್ದಾರೆ. ಏಪ್ರಿಲ್ 7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಸುಲಿಗೆ ಮತ್ತು ವಂಚನೆಗೆ ಸಂಬಂಧಿಸಿದಂತೆ ಐಟಿ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.