ಮೈಸೂರು: ತಮ್ಮ ಪರ ನಟ ಶಿವರಾಜ್ ಕುಮಾರ್ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯಿಸಿ, ಅವರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಸೋಮಣ್ಣ ಮತ್ತು ಪ್ರತಾಪ್ ಸಿಂಹ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಪ್ರತಾಪ್ ಸಿಂಹ ಸೋಮಣ್ಣ ಹೇಳಿಕೆಗೆ ಯಾಕೆ ಮಹತ್ವ ಕೊಟ್ಟಿದ್ದೀರಿ. ಇವರಿಬ್ಬರಿಗೆ ನಟ ಶಿವರಾಜ್ ಕುಮಾರ್ ಅವರೇ ಉತ್ತರ ಕೊಟ್ಟಿದ್ದಾರೆ. ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ನಟ ದುನಿಯಾ ವಿಜಯ್ ಸಹ ಮಾತನಾಡಿ, ಶಿವಣ್ಣ ಎಲ್ಲರನ್ನೂ ಪ್ರೀತಿಸುವವರೇ. ಯಾರೇ ಕರೆದರೂ ಹೋಗುತ್ತಾರೆ. ಶಿವಣ್ಣರದ್ದು, ದೇವರಂತಹ ಮನಸ್ಸು ನಟ ಶಿವರಾಜ್ ಕುಮಾರ್ ಬಗ್ಗೆ ಯಾರು ಮಾತನಾಡಬಾರದು. ಶಿವಣ್ಣ ಅವರ ದೊಡ್ಡತನ ಅದೇ ರೀತಿ ಇದೆ. ಅಣ್ಣಾವ್ರ ಮನೆ ಅಂದ್ರೆ ವಿಶೇಷ ಎಂದು ಹೇಳಿದರು.














