ಬೆಂಗಳೂರು ಗ್ರಾಮಾಂತರ: ಫೋನ್ ಬಳಸದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಖಿತಾ(18) ನೇಣಿಗೆ ಶರಣಾದ ವಿದ್ಯಾರ್ಥಿ.
ಸುಧಾ ಮತ್ತು ನಾರಾಯಣ ದಂಪತಿಯ ಪುತ್ರಿಯಾದ ಮೃತ ಲಿಖಿತಾ, ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು.
ಹೆತ್ತವರನ್ನ ಸಾಕುವ ಕನಸು ಕಂಡಿದ್ದ ಸುಧಾ ಹಾಗೂ ನಾರಾಯಣ ಅವರ ಮುದ್ದಿನ ಮಗಳು ಲಿಖಿತಾ ಒಳ್ಳೆಯ ವಿದ್ಯಾಬ್ಯಾಸ ಮಾಡುತ್ತಿದ್ದಳು. ಓದಿನಲ್ಲಿಯೂ ಮುಂದೆ ಇದ್ದ ಲಿಖಿತಾ, ಇತ್ತೀಚಿಗೆ ಫೋನಿನ ಗೀಳು ಹತ್ತಿಸಿಕೊಂಡಿದ್ದಳಂತೆ. ಯಾವಾಗಲೂ ಫೋನಿನಲ್ಲಿ ಮಾತನಾಡಿತ್ತಿದ್ದ ಆಕೆ, ಚಾಟಿಂಗ್, ಸ್ನ್ಯಾಪ್, ಇನ್ಸ್ಟಾ, ಫೇಸ್ ಬುಕ್ ಎಂದು ಫೋನ್ ನಲ್ಲಿ ಬ್ಯುಸಿ ಇರುತ್ತಿದ್ದಳು. ಇದನ್ನ ಗಮನಿಸಿದ್ದ ಲಿಖಿತಾ ತಂದೆ ನಾರಯಣ್ ಬೆಳಿಗ್ಗೆ ಬೈದು ಬುದ್ದಿ ಹೇಳಿದ್ದಾರೆ.
ಈ ಹಿನ್ನಲೆ ಯುವತಿ ರೂಂ ಸೇರಿದ್ದರು. ಬಳಿಕ ಎರಡು ಗಂಟೆ ನಂತರ ರೂಂ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ಯಾನ್ಗೆ ಸೀರೆ ಬಳಸಿ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.