ಮನೆ ರಾಜಕೀಯ ಶಾಲಾ ಸಮವಸ್ತ್ರ ವಿತರಣೆ ಸದ್ಯಕ್ಕಿಲ್ಲ: ಬಿ.ಸಿ.ನಾಗೇಶ್

ಶಾಲಾ ಸಮವಸ್ತ್ರ ವಿತರಣೆ ಸದ್ಯಕ್ಕಿಲ್ಲ: ಬಿ.ಸಿ.ನಾಗೇಶ್

0

ಬೆಂಗಳೂರು(Bengaluru): ರಾಜ್ಯಾದ್ಯಂತ ಶಾಲಾ ತರಗತಿಗಳು ಆರಂಭವಾಗಿದ್ದರೂ ಸದ್ಯಕ್ಕೆ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಗತಸಿಂಗ್ ನಾರಾಯಣ ಗುರು ಬಸವಣ್ಣ ಪಟ್ಟಿಗಳನ್ನು ತೆಗೆದು ಹಾಕಿದೆ ಎಂದು ಸುಳ್ಳು ಸುದ್ದಿಯನ್ನು ಹರಡುವ ಕಾರ್ಯ ಮಾಡುತ್ತಿದ್ದಾರೆ ನಾವು ತೆಗೆದುಹಾಕಿಲ್ಲ. ಮಕ್ಕಳಿಗೆ ಮರೆಯಾಗದಿರಲಿ ಎಂದು ಪಠ್ಯಕ್ರಮದಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ ಅಷ್ಟೇ. ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪಕ್ಕೆ ಮುದ್ರಣಗೊಂಡ ಬಳಿಕ ಉತ್ತರ ಸಿಗಲಿದೆ ಎಂದರು.

ರಾಜ್ಯ ಮತ್ತು ದೇಶ ವ್ಯಾಪಿ ಚರ್ಚೆಗೆ ಒಳಗಾಗಿದ್ದ ಸಮವಸ್ತ್ರ ವಿವಾದಕ್ಕೆ ಮತ್ತೆ ಅವಕಾಶ ನೀಡುವ ಸಲುವಾಗಿ ಕ್ರಮಕೈಗೊಂಡಿದ್ದು ಈಗಾಗಲೇ ಅಭಿವೃದ್ಧಿ ಸಮಿತಿಗೆ ಸೂಚನೆ ನೀಡಿದ್ದೇವೆ. ಪ್ರೌಢಶಾಲಾ ಮಟ್ಟದವರೆಗೆ ಸರ್ಕಾರವೇ ಮಕ್ಕಳಿಗೆ ಸಮವಸ್ತ್ರ ವಿತರಿಸುವ ವ್ಯವಸ್ಥೆ ಮಾಡಲಿದ್ದು, ಈ ಬಾರಿ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸಮವಸ್ತ್ರ ವಿತರಣೆಯಲ್ಲಿ ಸ್ವಲ್ಪ ತಡವಾಗುವ ಸಾಧ್ಯತೆ ಇದೆ ಎಂದರು.

ಹಿಂದಿನ ಲೇಖನಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ: ಕರ್ನಾಟಕ ಮಹಿಳಾ ಕಾಂಗ್ರೆಸ್
ಮುಂದಿನ ಲೇಖನಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ: ಸಿಎಂ ಬೊಮ್ಮಾಯಿ