ಮನೆ ರಾಜ್ಯ 52 ಕಂದಾಯ ಗ್ರಾಮಗಳ 2364 ಜನರಿಗೆ ಹಕ್ಕುಪತ್ರಗಳ ವಿತರಣೆ: ಡಾ.ಕೆ ವಿ ರಾಜೇಂದ್ರ

52 ಕಂದಾಯ ಗ್ರಾಮಗಳ 2364 ಜನರಿಗೆ ಹಕ್ಕುಪತ್ರಗಳ ವಿತರಣೆ: ಡಾ.ಕೆ ವಿ ರಾಜೇಂದ್ರ

0

ಮೈಸೂರು: ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ 52 ಕಂದಾಯ ಗ್ರಾಮಗಳ 2364 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯು ಗೊಲ್ಲರಹಟ್ಟಿ, ತಾಂಡ ಹಾಗೂ ಹಾಡಿಗಳನ್ನು ಕಾನೂನಾತ್ಮಕವಾಗಿ ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 1016, ಸರಗೂರು ತಾಲ್ಲೂಕಿನಲ್ಲಿ 646, ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ 248 ಹಾಗೂ ಟಿ ನರಸೀಪುರ ತಾಲ್ಲೂಕಿನಲ್ಲಿ 323 ಫಲಾನುಭವಿಗಳು ಸೇರಿದಂತೆ ಇತರೆ ತಾಲ್ಲೂಕುಗಳ ಫಲಾನುಭವಿಗಳು ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ಇನ್ನೂ 58 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನು ರಚಿಸಬೇಕಿದೆ. ಇದನ್ನು ಚುನಾವಣೆ ಮುಗಿದ ನಂತರ ಮಾಡಲಾಗುವುದು. ಈ ಗ್ರಾಮಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ವೇದಿಕೆಯ ಮೇಲೆ ಸಾಂಕೇತಿಕವಾಗಿ 10 ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗುವುದು. ಉಳಿದ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ತಾಲ್ಲೂಕು ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಉಪ ವಿಭಾಗಾಧಿಕಾರಿಗಳಾದ ಕಮಲಾಬಾಯಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಬಾಳೆಹಣ್ಣು ಸಿಕ್ಕಾಪಟ್ಟೆ ಹಣ್ಣಾಗಿದೆ ಎಂದು ಬಿಸಾಡೋ ತಪ್ಪು ಮಾಡದಿರಿ
ಮುಂದಿನ ಲೇಖನಸ್ಪಿರಿಚ್ಯುಯಲ್ ಡ್ರಾಮಾ, ಥ್ರಿಲ್ಲರ್ ಜಾನರ್ ಸಿನಿಮಾ “ಆರ”