ಮನೆ ಸುದ್ದಿ ಜಾಲ ಜಿಲ್ಲಾ ಮಟ್ಟದ ಸಂವಿಧಾನ ಅರಿವು ಸ್ಪರ್ಧೆ: ಬಹುಮಾನ ವಿತರಣೆ

ಜಿಲ್ಲಾ ಮಟ್ಟದ ಸಂವಿಧಾನ ಅರಿವು ಸ್ಪರ್ಧೆ: ಬಹುಮಾನ ವಿತರಣೆ

0

ಮೈಸೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಫ್ರೌಡಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸಂವಿಧಾನ ಅರಿವು ಸ್ಪರ್ದಾ ಕಾರ್ಯಕ್ರಮವನ್ನು ಮಹಾರಾಣಿ ಪ್ರಶಿಕ್ಷಣ ಸಂಸ್ಥೆ ನಾರಾಯಣ ಶಾಸ್ತಿç ರಸ್ತೆ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.


ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹೆಚ್.ಡಿ.ಕೋಟೆ ತಾಲ್ಲೂಕಿನ ಯರಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಜಿ, ದ್ವಿತೀಯ ಸ್ಥಾನವನ್ನು ಟಿ.ನರಸೀಪುರ ತಾಲ್ಲೂಕಿನ ರಂಗಸಮುದ್ರ ಫ್ರೌಡ ಶಾಲೆಯ ವಿದ್ಯಾರ್ಥಿನಿ ನವ್ಯಶ್ರೀ ಪಡೆದುಕೊಂಡರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಟಿ.ನರಸೀಪುರ ತಾಲ್ಲೂಕಿನ ಅತ್ತಹಳ್ಳಿ ಫ್ರೌಡ ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಆರ್, ದ್ವಿತೀಯ ಸ್ಥಾನವನ್ನು ಹುಣಸೂರು ತಾಲ್ಲೂಕಿನ ಜೋಸೆಫ್ ಫ್ರೌಡ ಶಾಲೆಯ ವಿದ್ಯಾರ್ಥಿನಿ ಹಿತಶ್ರೀ ಕೆ.ಪಿ. ಅವರು ಪಡೆದುಕೊಂಡರು.
ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಟಿ. ನರಸೀಪುರ ತಾಲ್ಲೂಕಿನ ಬಿ.ಸೀ. ಹಳ್ಳಿ ಸರ್ಕಾರಿ ಫ್ರೌಡ ಶಾಲೆಯ ವಿದ್ಯಾರ್ಥಿ ತೇಜಸ್ವಿ ಹಾಗೂ ಸೋಸಲೆ ಆದರ್ಶ ವಿದ್ಯಾಲಯದ ಆರ್ಯನ್, ದ್ವಿತೀಯ ಸ್ಥಾನವನ್ನು ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಫ್ರೌಡ ಶಾಲೆಯ ವಿನಯ್ ಮತ್ತು ನರ್ಸಲ ತಂಡ ಪಡೆದುಕೊಂಡಿತು.
ಚಿತ್ರಕಲಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಟಿ.ನರಸೀಪುರ ತಾಲ್ಲೂಕಿನ ತಡಿಮಾಲಂಗಿ ಸರ್ಕಾರಿ ಫ್ರೌಡ ಶಾಲೆಯ ವಿದ್ಯಾರ್ಥಿ ಜೀವನ್ ಎಂ, ದ್ವಿತೀಯ ಸ್ಥಾನವನ್ನು ದಕ್ಷಿಣ ವಲಯದ ಜಿ.ಎಸ್.ಎಸ್.ಎಸ್ ಫ್ರೌಡ ಶಾಲೆಯ ವಿದ್ಯಾರ್ಥಿನಿ ಬಿ ಸಿಂಚನ ಪಡೆದುಕೊಂಡರು.
ಘೋಷಣಾ ವಾಕ್ಯ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಫ್ರೌಡ ಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹಾಗೂ ದ್ವಿತೀಯ ಸ್ಥಾನವನ್ನು ಉತ್ತರ ವಲಯ ಗುಡ್ ಶಪರ್ಡ್ ಶಾಲೆಯ ವಿದ್ಯಾರ್ಥಿ ಫಯಿಜಾ ಅಂಜುಮ್ ಅವರು ಪಡೆದುಕೊಂಡರು.
ಜಿಲ್ಲೆಯ ವಿವಿಧ ಶಾಲೆಗಳಿಂದ 116 ವಿದ್ಯಾರ್ಥಿಗಳು ಬಾಗವಹಿಸಿದ್ದರು. ಬಹುಮಾನ ವಿತರಣೆಯನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಆರಸ್ ಅವರು ಮಾಡಿದರು.