ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಬೇಡಿಕೆ ಮತ್ತು ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.
ಎಸ್ಎಂವಿಟಿ ಬೆಂಗಳೂರು-ಕಲಬುರಗಿ, ಎಸ್ ಎಸ್ ಎಸ್ ಹುಬ್ಬಳ್ಳಿ-ಯಶವಂತಪುರ ನಡುವೆ ವಿಶೇಷ ರೈಲುಗಳು ಸಂಚರಿಸಲಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ಬೆಂಗಳೂರು-ಕಲಬುರಗಿ ವಿಶೇಷ ರೈಲು
ಎಸ್ಎಮ್ವಿಟಿ ಬೆಂಗಳೂರು-ಕಲಬುರಗಿ (06217) ವಿಶೇಷ ರೈಲು ಅಕ್ಟೋಬರ್ 31 ರಂದು ರಾತ್ರಿ 9:15ಕ್ಕೆ ಎಸ್ಎಮ್ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.
ಎಸ್ಎಮ್ವಿಟಿ ಬೆಂಗಳೂರು-ಕಲಬುರಗಿ (06218) ವಿಶೇಷ ರೈಲು ನವೆಂಬರ್ 01 ರಂದು ಬೆಳಗ್ಗೆ 9:35ಕ್ಕೆ ಕಲುಬುರಗಿಯಿಂದ ಹೊರಟು ಅದೇ ದಿನ ರಾತ್ರಿ 8:00ಕ್ಕೆ ಎಸ್ಎಮ್ವಿಟಿ ಬೆಂಗಳೂರಿನಿಂದ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂಟಕಲ್, ಅಡೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ರೈಲು 2 ಎಸಿ ತ್ರಿ ಟಯರ್ ಬೋಗಿಗಳು, 2 ಸ್ಲೀಪರ್ ಕ್ಲಾಸ್, 12 ಜನರಲ್ ಸೆಕೆಂಡ್ ಕ್ಲಾಸ್, 1 ಎಸ್ಎಲ್ಆರ್ಒ, 1 ಲಗೇಜ್/ ಬ್ರೇಕ್ ವ್ಯಾನ್ಸ್ ಕಮ್ ಜನರೇಟ್ ಕಾರ್ ಸೇರಿದಂತೆ ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ.
ಹುಬ್ಬಳ್ಳಿ-ಯಶವಂತಪರ ರೈಲು
ಹುಬ್ಬಳ್ಳಿ-ಯಶವಂತಪುರ (07323) ವಿಶೇಷ ರೈಲು ಅಕ್ಟೋಬರ್ 30 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಟು ಅದೇ ದಿನ ಸಂಜೆ 3:45ಕ್ಕೆ ಯಶವಂತಪುರ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ಹಾವೇರಿ, ರಾಣೇಬೆನ್ನೂರು, ದಾವಣಗೆರೆ, ಬೀರೂರು, ಅರಸಿಕೇರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ರೈಲು 1 ಎಸಿ ಫಸ್ಟ್ ಕ್ಲಾಸ್ ಬೋಗಿ, 2 ಎಸಿ ಟೂ ಟಯರ್ ಬೋಗಿಗಳು, 4 ಎಸ್ಇ 3 ಟಯರ್ ಬೋಗಿಗಳು, ಎಸಿ 3 ಟಯರ್ ಎಕಾನಾಮಿ, 6 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್ ಬ್ರೇಕ್ ಮತ್ತು ಜನರಲ್ ಕಾರ್ಸ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಹೊಂದಿರಲಿದೆ.