ಬೆಂಗಳೂರು(Bengaluru): ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಸಚಿವ ಈಶ್ವರಪ್ಪ(Eshwarappa) ಅವರನ್ನು ಬಂಧಿಸಿ. ನ್ಯಾಯಯುತವಾಗಿ ಪ್ರಕರಣದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(D.K.Shivakumar) ಆಗ್ರಹಿಸಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ಕೇವಲ ಈಶ್ವರಪ್ಪ ವಿರುದ್ಧ ಹೋರಾಟ ಮಾಡುತ್ತಿಲ್ಲ 40% ಭ್ರಷ್ಟ ಕಮಿಷನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸಚಿವ ಈಶ್ವರಪ್ಪಗೆ ಸಿಎಂ ಬೊಮ್ಮಾಯಿ ಸಪೋರ್ಟ್ ಇದೆ. ಇದು ತಪ್ಪು. ಸಂತೋಷ್ ಪ್ರಕರಣದ ತನಿಖಯೆಯಾಗಬೇಕು. ನಾವು ರಾಜ್ಯದ ಎಲ್ಲಾ ಕಡೆಗಳಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದರು.
ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯುಡಿ ಪ್ರಕರಣ ದಾಖಲಿಸಲಿ. ಮೊದಲು ಈಶ್ವರಪ್ಪ ಬಂಧಿಸಬೇಕು ಈಶ್ವರಪ್ಪ ತಪ್ಪು ಮಾಡಿಲ್ಲ ಅಂತಾ ಸಿಎಂ ಹೇಳಿದ್ರು. ಹೀಗೆ ಹೇಳಿದ್ರೆ ಯಾವ ಅಧಿಕಾರಿ ತನಿಖೆ ಮಾಡ್ತಾರೆ ಎಂದರು.