ಮನೆ ಸುದ್ದಿ ಜಾಲ ಡಿಕೆಶಿ ನ.21 ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರಂತೆ; ಪ್ರಶ್ನೆಗೆ ಸಿದ್ದು ಗರಂ

ಡಿಕೆಶಿ ನ.21 ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರಂತೆ; ಪ್ರಶ್ನೆಗೆ ಸಿದ್ದು ಗರಂ

0

ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ನವೆಂಬರ್ 21 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯ ವಿಚಾರವಾಗಿ ಇಂದು ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿಎಂಗೆ ಈ ಪ್ರಶ್ನೆ ಎದುರಾಯಿತು.

ಯಾರ್ ಹೇಳಿದ್ದು? ನಿನಗೆ ಯಾರ್ ಹೇಳಿದ್ರು? ನಿನಗೆ ಹೆಂಗೆ ಗೊತ್ತಾಯ್ತು? ಯಾವ ಪತ್ರಿಕೆ? ಯಾಬ ಪತ್ರಿಕೆ ನೋಡಿದೆ ನೀನು? ನಾನು ಎಲ್ಲಾ ಪತ್ರಿಕೆ ಓದುತ್ತೇನೆ. ಯಾವುದರಲ್ಲೂ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಪತ್ರಿಕೆಯ ಹೆಸರು ಹೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

ಈ ಸಭೆ ಕುರಿತು ಮಾತನಾಡಿ, ಅಲೆಮಾರಿಗಳ ಮಹಾ ಒಕ್ಕೂಟದ ಸಭೆ ಮಾಡಿದ್ದೇವೆ. ನಾಗಮೋಹನ್ ದಾಸ್ ಅವರು ನಮಗೆ 1% ಕೊಟ್ಟಿದ್ದರು. ಆದರೆ, ನಮಗೆ ಸಿ ಗ್ರೂಪ್‌ಗೆ ಸೇರಿಸಿದ್ದೀರಾ. ನಮಗೆ ಪ್ರತ್ಯೇಕ 1% ಕೊಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಅಭಿವೃದ್ಧಿ ನಿಗಮ ಮಾಡಲು ಕೇಳಿದ್ದಾರೆ.

ಆರ್ಥಿಕ ಪ್ಯಾಕೇಜ್ ಕೊಡಬೇಕು ಅಂತ ಮನವಿ ಮಾಡಿದ್ರು. ನಾವು ಸಾಮಾಜಿಕ ನ್ಯಾಯದ ಪರ ಇರೋದು. 1% ಕೊಡೋ ಬಗ್ಗೆ ಕಾನೂನು ತಜ್ಞರ ಜೊತೆ ಸಭೆ ಮಾಡಿ ತೀರ್ಮಾನ ಮಾಡ್ತೀವಿ. ಅಭಿವೃದ್ಧಿ ನಿಗಮ ಮಾಡ್ತೀವಿ. ಆರ್ಥಿಕ ಪ್ಯಾಕೇಜ್ ಕೊಡೋದಾಗಿ ಹೇಳಿದ್ದೇವೆ. ಸ್ವಲ್ಪ ಸಮಯ ಕೊಡಿ ಅಂತ ಕೇಳಿದ್ದೇವೆ.

ಕೋರ್ಟ್ ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಅಲೆಮಾರಿಗಳಿಗೆ ನಾಗಮೋಹನ್ ದಾಸ್ ವರದಿ ಅನ್ವಯ 1% ಕೊಡಬೇಕು ಅಂತ ಮನವಿ ಮಾಡಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ 1% ಕೊಡೋ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡೋದಾಗಿ ಸಿಎಂ ಹೇಳಿದ್ದಾರೆ.

ಪ್ರತ್ಯೇಕ ನಿಗಮ ಮಾಡಲು ಒಪ್ಪಿದ್ದಾರೆ. ವಿಶೇಷ ಆರ್ಥಿಕ ಪ್ಯಾಕೇಜ್ ಕೊಡೋದಾಗಿ ಹೇಳಿದ್ದೇವೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀವಿ. ಆದಷ್ಟೂ ಬೇಗ ತೀರ್ಮಾನ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಶೇಷಪ್ಪ ಮಾತನಾಡಿದರು.

1% ಮೀಸಲಾತಿ ಕೊಡಲು ಸ್ವಲ್ಪ ಸಮಯ ಕೊಡಲು ಸರ್ಕಾರ ಕೇಳಿದೆ. ನೇಮಕಾತಿ ಪ್ರಕ್ರಿಯೆ ಶುರು ಆಗೋ ಮುನ್ನ ಸಮಸ್ಯೆ ಪರಿಹಾರ ಮಾಡಬೇಕು ಅಂತ ಹೇಳಿದ್ದೇವೆ. ಕೇಸ್ ವಾಪಸ್ ಪಡೆಯೋ ಬಗ್ಗೆ ಒಕ್ಕೂಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಸಾಮಾಜಿಕ ಹೋರಾಟಗಾರ ಶ್ರೀಧರ್ ತಿಳಿಸಿದರು.