ಮನೆ ಅಪರಾಧ ಸತ್ತವರ ಹೆಸರಿನಲ್ಲಿ ಡಿಎಲ್: ರೋಸ್ ಮಟ್ಟ ಕಂಪನಿಯ ಹರ್ಷ ಹಾಗೂ ನಕಲಿ ಸರ್ಕಾರಿ ನೌಕರರಿಂದ ಆರ್...

ಸತ್ತವರ ಹೆಸರಿನಲ್ಲಿ ಡಿಎಲ್: ರೋಸ್ ಮಟ್ಟ ಕಂಪನಿಯ ಹರ್ಷ ಹಾಗೂ ನಕಲಿ ಸರ್ಕಾರಿ ನೌಕರರಿಂದ ಆರ್ ಟಿಓ ಕಚೇರಿಯಲ್ಲಿ ಮತ್ತೊಂದು ಅಕ್ರಮ

0

ಮೈಸೂರು: ಸತ್ತವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ, ಡಿ.ಎಲ್ ಪಡೆಯಲು ಅರ್ಜಿ ಸಲ್ಲಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Join Our Whatsapp Group

ಮೃತ ವ್ಯಕ್ತಿಯ ಹೆಸರಿನಲ್ಲಿ ಡಿಎಲ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿರುವುದಲ್ಲದೇ, ಬಯೋ ಮೆಟ್ರಿಕ್ ಕೂಡ ನೀಡಿರುವುದು ಆರ್ ಟಿಓ ಅಧಿಕಾರಿಗಳ ಭ್ರಷ್ಟಚಾರ ಹಾಗೂ ಬೇಜವಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

New Doc 11-15-2024 14.51

ಏನಿದು ಪ್ರಕರಣ?

ನವೀನ್ ಎಂಬ ವ್ಯಕ್ತಿ 2024ರ ಆಗಸ್ಟ್ 4ರಲ್ಲಿ ಮೃತಪಟ್ಟಿದ್ದಾರೆ.  ಆದರೆ ವಿಜಯನಗರದಲ್ಲಿರುವ ಲಕ್ಷ್ಮಿ ಡ್ರೈವಿಂಗ್ ಸ್ಕೂಲ್’ನಿಂದ ನವೀನ್ ಡಿ.ಎಲ್ ನವೀಕರಣಕ್ಕೆ ಆರ್.ಟಿ.ಓ ಕಚೇರಿಗೆ 2024ರ ಅಕ್ಟೋಬರ್ 22ರಂದು ಅರ್ಜಿ ಸಲ್ಲಿಸಿದ್ದು,  23ರಂದು ದಾಖಲೆಗಳನ್ನು ಅಪ್ ಲೋಡ್ ಮಾಡಲಾಗಿದೆ. ಮಾತ್ರವಲ್ಲದೇ ನವೆಂಬರ್ 8ರಂದು ಮೃತ ವ್ಯಕ್ತಿಯ ಬಯೋಮೆಟ್ರಿಕ್  ಕೂಡ ತೆಗೆದುಕೊಳ್ಳಲಾಗಿದೆ. ವಿಚಿತ್ರವೆನಿಸಿದರೂ ಇದು ಸತ್ಯ. ಮಾತ್ರವಲ್ಲದೇ ಡಿಜಿಟಲ್ ಸಹಿ ಕೂಡ ನಕಲು ಮಾಡಿದ್ದು, ಸಹಿಯಿರುವ ಪೇಪರ್ ಅಂಟಿಸಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಗಮನಿಸಿಯೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿರುವುದು ಆರ್ ಟಿಓ ಕಚೇರಿಗಳಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿರುವುದನ್ನು ಸಾಬೀತುಪಡಿಸುತ್ತದೆ.

ರೋಸ್ ಮಟ್ಟ ಕಂಪನಿಯ ಹರ್ಷ ಹಾಗೂ ಆರ್ ಟಿ ಓ ಕಚೇರಿಯ ಡಿ.ಎಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ಈ ಎಲ್ಲಾ ಅಕ್ರಮಗಳ ಹಿಂದೆ ಇದ್ದಾರೆಂಬ ಮಾಹಿತಿ ಇದ್ದು,  ಸೂಕ್ತ ತನಿಖೆಯಿಂದಷ್ಟೇ ಮಾಹಿತಿ ಹೊರಬರಬೇಕಿದೆ.

ಈ ಅಕ್ರಮ ಕುರಿತು ಮಾಹಿತಿ ಪಡೆದ ನವೀನ್ ಕುಟುಂಬಸ್ಥರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಸ್ತುತ ಆರ್.ಟಿ.ಓ ಅಧಿಕಾರಿಗಳು ದೂರುದಾರರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಡಿ.ಎಲ್ ಅನ್ನು ರದ್ದುಪಡಿಸಿದ್ದಾರೆ. ರದ್ದು ಪಡಿಸಿದಾಯಿತು, ಅದರೆ ಅಕ್ರಮದಲ್ಲಿ ಭಾಗಿಯಾಗಿ ಹಗರಣವನ್ನು ಸೃಷ್ಟಿಸಿರುವ ರೋಸ್ ಮಟ್ಟ ಕಂಪನಿಯ ಹರ್ಷ ಹಾಗೂ ಅವರಿಗೆ ಸಹಕರಿಸಿರುವ ಸರ್ಕಾರಿ ನೌಕರರು ಹಾಗೂ ಹಗರಣಗಳಿಗೆ ಬೆನ್ನೆಲುಬಾಗಿರುವ ನಕಲಿ ಸರ್ಕಾರಿ ನೌಕರರಿಗೆ ಕಡಿವಾಣ ಯಾವಾಗ.

ನಕಲಿ ಡಿಎಲ್ ವಿತರಿಸುವ ಸಲುವಾಗಿ ಈಗಾಗಲೇ ಆರ್.ಟಿ.ಓ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದೆ. ಇದರ ಸಾಲಿಗೆ ಈ ಪ್ರಕರಣವೂ ಸೇರಿಕೊಂಡಿದೆ. ಅನಧಿಕೃತವಾಗಿ ಡಿಎಲ್ ಪಡೆದ ವ್ಯಕ್ತಿಗಳು  ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೇ, ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ಭಾಗಿಯಾಗುವ  ಸನ್ನಿವೇಶವಿರುತ್ತದೆ. ಇದು ಕಾನೂನು ಸುವ್ಯವಸ್ಥೆ ಕಾಪಾಡಲು ತೊಡಕಾಗಿರುವುದರಿಂದ ಈ ಸಂಬಂಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಇನ್ನು ಮುಂದಾದರೂ ನಾಗರಿಕರ ಹಿತದೃಷ್ಟಿಯಿಂದ ಆರ್.ಟಿ.ಓ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ.