ಸಾಹಿತ್ಯ ಪ್ರಿಯರ ಅಚ್ಚುಮೆಚ್ಚಿನ ಲೇಖಕ ವಿಲಿಯಂ ಶೇಕ್ಸ್’ಪಿಯರ್. ಆತನ ಕಥೆಗಳನ್ನು ಓದದವರಿಲ್ಲ. ಶೇಕ್ಸ್ ಪಿಯರ್ ನಾಟಕಗಳನ್ನು ನೋಡಲು ಕಾತರದಿಂದ ಇಂದಿಗೂ ಕಾಯವವರ ಸಂಖ್ಯೆ ಕಡಿಮೆಯೇನಿಲ್ಲ.
ಆದರೆ ಸ್ಯಾಂಡಲ್ ವುಡ್ ನಲ್ಲಿ ಶೇಕ್ಸ್ ಪಿಯರ್ ಕಥೆಗಳ ಆಧಾರಿತವಾಗಿ ಎಷ್ಟು ಸಿನಿಮಾಗಳು ರೂಪುಗೊಂಡಿವೆ ಎಂಬ ಮಾಹಿತಿ ನಿಮಗೆ ಇದೆಯಾ ?
ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಸಿನಿಮಾಗಳಿಗೆ ಬಹುತೇಕ ಕಾದಂಬರಿ ಆಧರವೇ ಇರುತ್ತಿತ್ತು. ರಾಜ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಹಾಗೆ ಒಳ್ಳೆ ಕಾದಂಬರಿ ಇದ್ದರೇ, ಅವುಗಳನ್ನ ಸಿನಿಮಾ ಮಾಡೋಕೆ ಪಾರ್ವತಮ್ಮ ರಾಜ್ ಕುಮಾರ್ ಮನಸ್ಸು ಮಾಡುತ್ತಿದ್ದರು. ಆಗ ರಾಜ್ ಸಹೋದರ ವರದಣ್ಣ ಹಾಗೂ ಚಿ. ಉದಯಶಂಕರ್ ಆ ಬಗ್ಗೆ ಚರ್ಚಿಸಿ ಸಿನಿಮಾ ಮಾಡಲು ಮುಂದಾಗುತ್ತಿದ್ದರು.
ಬಹದ್ದೂರ್ ಗಂಡು
ರಾಜ್ ಕುಮಾರ್ ಅಭಿನಯದ ಬಹದ್ದೂರ್ ಗಂಡು ಚಿತ್ರ, ಶೇಕ್ಸ್’ಪಿಯರ್ ಬರೆದ The Taming of the Shrew ನಾಟಕ ಆಧಾರಿತ. ಈ ನಾಟಕವನ್ನ ಆಧರಿಸಿಯೇ ರೈಟರ್ ಎಚ್.ವಿ. ಸುಬ್ಬರಾವ್ ಕಥೆ ಬರೆದಿದ್ದರು. ಅದೇ ಕಥೆಯನ್ನ ಆಧರಿಸಿಯೇ ಚಿ. ಉದಯ್ ಶಂಕರ್, ಬಹದ್ದೂರ್ ಗಂಡು ಚಿತ್ರಕಥೆ ಬರೆದರು.
ಎ.ವಿ. ಶೇಷಗಿರಿ ರಾವ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. 1976 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. 19 ವಾರ ಈ ಚಿತ್ರ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು.
ನಂಜುಂಡಿ ಕಲ್ಯಾಣ
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ರಾಘವೇಂದ್ರ ರಾಜ್ ಕುಮಾರ್ ಈ ಮೂಲಕ ಜೋಡಿ ಆಗಿದ್ದರು. ಗಿರಿಜಾ ಲೋಕೇಶ್ ಅವರೂ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಎಂ.ಎಸ್. ರಾಜಶೇಖರ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು.
1989 ರಲ್ಲಿ ತೆರೆಗೆ ಬಂದ ಈ ಚಿತ್ರ ಥಿಯೇಟರ್ ನಲ್ಲಿ 90 ವಾರಗಟ್ಟಲೆ ಯಶಸ್ವಿಯಾಗಿಯೆ ಓಡಿತ್ತು. ಅಷ್ಟು ಸೂಪರ್ ಹಿಟ್ ಆಗಿರೋ ಈ ಚಿತ್ರಕ್ಕೆ ಪರ್ವತವಾಣಿ ಬರೆದ ನಾಟಕವನ್ನ ಆಧರಿಸಿದೆ.
ಇನ್ನುಳಿದಂತೆ ವಿಲಿಯಂ ಶೇಕ್ಸ್ಪಿಯರ್ ನಾಟಕಗಳು ಕನ್ನಡದಲ್ಲಿ ಸಿನಿಮಾ ರೂಪದಲ್ಲಿ ಜನರಿಗೆ ತಲುಪಿವೆ. ಸೂಪರ್ ಹಿಟ್ ಕೂಡ ಆಗಿ ಇತಿಹಾಸ ಪುಟ ಸೇರಿವೆ.