ಮನೆ ಯೋಗಾಸನ ನಿಮಗೆ ಗೊತ್ತಾ? ಈ ಯೋಗಾಸನಗಳು, ಪುರುಷರಿಗೆ ಒಳ್ಳೆಯದಂತೆ!

ನಿಮಗೆ ಗೊತ್ತಾ? ಈ ಯೋಗಾಸನಗಳು, ಪುರುಷರಿಗೆ ಒಳ್ಳೆಯದಂತೆ!

0

ಯೋಗ ಮಾಡುವುದು ದೇಹದ ಆರೋಗ್ಯಕ್ಕೆ ಎಂದು ಎಲ್ಲರಿಗೂ ಗೊತ್ತು. ಆದರೆ ಅದರಿಂದ ಲೈಂಗಿಕ ಜೀವನ ಕೂಡ ಅಭಿವೃದ್ಧಿಯಾಗುತ್ತದೆ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲ. ಹೌದು ಇದು ನಿಜ. ಏಕೆಂದರೆ ಇದು ಸಹ ಒಂದು ರೀತಿಯ ವ್ಯಾಯಾಮದಂತೆ!

ದೈಹಿಕವಾಗಿ ಕಸರತ್ತು ಮಾಡಿದರೆ, ದೇಹಕ್ಕೆ ಬಲ ಬರುತ್ತದೆ. ಮಾಂಸಖಂಡಗಳು ಬೆಳೆಯುತ್ತವೆ. ಇದರಿಂದ ಲೈಂಗಿಕವಾಗಿ ಕೂಡ ಹೆಚ್ಚು ಹೊತ್ತು ಸಕ್ರಿಯವಾಗಿರಲು ಅನುಕೂಲವಾಗುತ್ತದೆ. ಪುರುಷರಿಗೆ ಲೈಂಗಿಕ ವಿಚಾರದಲ್ಲಿ ಉಪಯೋಗವಾಗುವ ಕೆಲವೊಂದು ಯೋಗಾಸನಗಳನ್ನು ನೋಡುವುದಾದರೆ…

ಬ್ರಹ್ಮಚರ್ಯಸನ

ಇದು ಪುರುಷರ ವೃಷಣಗಳ ಕಾರ್ಯಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ ಜೊತೆಗೆ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮ ಪಡಿಸುತ್ತದೆ. ರಾತ್ರಿಯ ಸಮಯದಲ್ಲಿ ಪುರುಷರಿಗೆ ಶೀಘ್ರಸ್ಕಲನ ಸಮಸ್ಯೆಗೆ ಇದು ರಾಮಬಾಣ ಎಂದು ಹೇಳಬಹುದು.

ಇದನ್ನು ಮಾಡಲು…..

• ಯೋಗ ಚಾಪೆಯ ಮೇಲೆ ಮೊದಲು ಮಂಡಿಯೂರಿ ಕುಳಿತುಕೊಳ್ಳಿ. ಹೇಗೆಂದರೆ ನಿಮ್ಮ ಎರಡು ಮಂಡಿಗಳು ಒಂದುಕ್ಕೊಂದು ತಾಗುತ್ತಿರಬೇಕು ಆದರೆ ಕಾಲುಗಳು ಮಾತ್ರ ಸ್ವಲ್ಪ ದೂರ ಇರಬೇಕು. ನಿಮಗೆ ಎರಡು ಕಾಲುಗಳ ನಡುವೆ ಇರುವ ಜಾಗದಲ್ಲಿ ನೆಲದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿ.

• ನಿಮ್ಮ ಮಂಡಿಗಳ ಮೇಲೆ ನಿಮ್ಮ ಎರಡು ಕೈಗಳನ್ನು ಇಟ್ಟುಕೊಳ್ಳಿ. ನಿಧಾನವಾಗಿ ಉಸಿರಾಡಿ. ಇದೇ ರೀತಿ ಸ್ವಲ್ಪ ನಿಮಿಷಗಳು ಇದ್ದು, ಆನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ.

ಗೋಮುಖಾಸನ

ಇದು ಸಹ ಪುರುಷರ ವೃಷಣಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹರ್ನಿಯಾ ಮತ್ತು ಹೈಡ್ರೋಸಿಲ್ ಅಂದರೆ ವೃಷಣಗಳಲ್ಲಿ ದ್ರವ ತುಂಬಿಕೊಳ್ಳುವ ಸಮಸ್ಯೆಯನ್ನು ಜೊತೆಗೆ ಶೀಘ್ರಸ್ಕಲನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಈ ಯೋಗಾಸನವನ್ನು ಹೀಗೆ ಮಾಡಿ

ಮೊದಲಿಗೆ ಮಂಡಿಗಳನ್ನು ಮಡಸಿ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ದೇಹವನ್ನು ನೇರ ವಾಗಿ ಇರಿಸಿಕೊಂಡು ಹೆಬ್ಬೆರಳುಗಳು ನೆಲದ ಕಡೆಗೆ ಇರುವಂತೆ ನೋಡಿಕೊಳ್ಳಿ. ನಿಮ್ಮ ಬಲಗೈ ಮಡಚಿ ಹಿಂಬದಿಗೆ ಹಿಡಿದುಕೊಳ್ಳಿ.

ನಿಮ್ಮ ಬೆರಳುಗಳು ಮೇಲ್ಭಾಗಕ್ಕೆ ಇರಲಿ, ನಿಮ್ಮ ಬೆನ್ನು ಹುರಿಗೆ ತಾಗುವಂತೆ ಹಿಡಿದುಕೊಳ್ಳಿ. ಈಗ ನಿಮ್ಮ ಎಡಗೈ ತೆಗೆದುಕೊಂಡು ನಿಮ್ಮ ತಲೆಯ ಮೇಲೆ ಇಟ್ಟುಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಬಲಗೈಯನ್ನು ಎಡಗೈಗೆ ಸೇರಿಸಲು ಮುಂದಾಗಿ. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.

ಭುಜಂಗಾಸನ

ನೀವು ಹಾಸಿಗೆಯಲ್ಲಿ ದೀರ್ಘಕಾಲ ಲೈಂಗಿಕ ತೃಪ್ತಿ ಪಡೆಯಲು ಅನುಕೂಲವಾಗುವಂತೆ ನಿಮಗೆ ಸಹಾಯ ಮಾಡುತ್ತದೆ ಈ ಯೋಗಾಸನದ ಭಂಗಿ.

ಇದನ್ನು ಮಾಡಲು…..

• ಮೊದಲು ನೆಲದ ಮೇಲೆ ನಿಮ್ಮ ಹೊಟ್ಟೆಯನ್ನು ಇರಿಸಿ. ನಿಮ್ಮ ಹಣೆಯ ಭಾಗವನ್ನು ನೆಲದ ಮೇಲೆ ಇರಿಸಿ. ನಿಮ್ಮ ಪಾದಗಳು ಮತ್ತು ಹಿಮ್ಮಡಿಗಳನ್ನು ಒಟ್ಟಿಗೆ ಇರಿಸಿಕೊಳ್ಳಿ. ನಿಮ್ಮ ಕೈಗಳನ್ನು ಭುಜದ ಬಳಿ ತಂದು ಇಟ್ಟುಕೊಳ್ಳಿ. ಈಗ ನಿಧಾನವಾಗಿ ಉಸಿರನ್ನು ಹೊರ ಬಿಟ್ಟು ನಿಮ್ಮ ದೇಹವನ್ನು ಮೇಲ್ಭಾ ಗಕ್ಕೆ ಎತ್ತಿ.

• ಮೊದಲು ನಿಮ್ಮ ತಲೆ, ಎದೆ, ನಿಮ್ಮ ಬೆನ್ನು ಮತ್ತು ನಿಮ್ಮ ಸೊಂಟದ ಭಾಗವನ್ನು ಎತ್ತಿ. ಈಗ ನಿಮ್ಮ ಕೈಗಳನ್ನು ನೇರವಾಗಿ ಇರಿಸಿಕೊಂಡು ಸ್ವಲ್ಪ ಹೊತ್ತು ಇದ್ದು ನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ.