ಮನೆ ರಾಷ್ಟ್ರೀಯ 18ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವ ಗ್ರಾಮ ಯಾವುದು ಗೊತ್ತೆ ?

18ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವ ಗ್ರಾಮ ಯಾವುದು ಗೊತ್ತೆ ?

0

ಮುಂಬೈ(Mumbai): 18 ವರ್ಷ ವಯಸ್ಸಿನ ಒಳಗಿನವರು ಮೊಬೈಲ್ ಬಳಸದಂತೆ ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಿಷೇಧ ಹೇರಲಾಗಿದೆ.‌

ಪುಸಾದ್ ತಹಸಿಲ್ ವ್ಯಾಪ್ತಿಯ ಬನ್ಸಿ ಗ್ರಾಮ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಕ್ಕಳು ಗೇಮ್ಸ್ ಆಡವುದು ಮತ್ತು ಅವರ ವೀಕ್ಷಣೆಗೆ ಯೋಗ್ಯವಲ್ಲದ ವೆಬ್‌ಸೈಟ್‌ಗಳನ್ನು ಸರ್ಫಿಂಗ್ ಮಾಡುವ ವ್ಯಸನಿಗಳಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.ಎಲ್ಲ ಪೋಷಕರಿಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಬನ್ಸಿ ಗ್ರಾಮ ಪಂಚಾಯಿತಿಯ ಸರಪಂಚ್ ಗಜಾನನ ತಾಳೆ ಹೇಳಿದ್ದಾರೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಬಳಕೆಗೆ ನಿಷೇಧ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಈ ನಿರ್ಣಯದ ಅನುಷ್ಠಾನದಲ್ಲಿ ತೊಡಕುಗಳು ಎದುರಾಗುತ್ತವೆ ಎಂಬುದು ನಮಗೆ ತಿಳಿದಿದೆ. ಆದರೆ, ನಾವು ಕೌನ್ಸೆಲಿಂಗ್ ಮೂಲಕ ಈ ಸಮಸ್ಯೆಗಳನ್ನು ನಿವಾರಿಸುತ್ತೇವೆ. ನಿಯಮದ ಉಲ್ಲಂಘನೆಗಾಗಿ ದಂಡ ವಿಧಿಸಬೇಕಾಗಬಹುದು. ಆದರೆ, ಗ್ರಾಮಸ್ಥರು ಈ ನಿರ್ಧಾರವನ್ನು ಒಮ್ಮತದಿಂದ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ಹಿಂದಿನ ಲೇಖನಎಲೆಚುಕ್ಕಿ ರೋಗದ ತಪಾಸಣೆಗೆ ಶಿವಮೊಗ್ಗಕ್ಕೆ ಆಗಮಿಸಲಿರುವ ಕೇಂದ್ರದ ತಂಡ: ಆರಗ ಜ್ಞಾನೇಂದ್ರ
ಮುಂದಿನ ಲೇಖನಮುರುಘಾ ಶ್ರೀ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎಸ್​.ಕೆ.ಬಸವರಾಜನ್  ಕಾಂಗ್ರೆಸ್ ಟಿಕೆಟ್’ಗೆ ಅರ್ಜಿ ಸಲ್ಲಿಕೆ