ಪ್ರಸ್ತುತ ದಿನಮಾನದಲ್ಲಿ ಇಡೀ ದಿನ ಫೋನ್’ನಲ್ಲಿಯೇ ಕಳೆಯುವಂತಾಗಿದೆ. ಕೈಯಲ್ಲಿ ಫೋನ್ ಇಲ್ಲದೇ ಬದುಕುವುದು ಕಷ್ಟವಾಗುತ್ತಿದೆ.
ಈಗ ಮೊಬೈಲ್ ಫೋನ್‌ಗಳು ಜನರ ಜೀವನದ ಭಾಗವಾಗಿದೆ.ಕ್ಯಾಮೆರಾದ ಸಹಾಯದಿಂದ ನಾವು ನಮ್ಮ ಮರೆಯಲಾಗದ ಕ್ಷಣಗಳನ್ನು ಫೋಟೋಗಳು ಅಥವಾ ವೀಡಿಯೊಗಳಲ್ಲಿ ಸೆರೆಹಿಡಿಯಬಹುದು. ಮೊದಲು ಕ್ಯಾಮೆರಾ ಇದ್ದರೆ ಮಾತ್ರ ನಮ್ಮ ನೆಚ್ಚಿನ ದೃಶ್ಯಗಳನ್ನು ಕ್ಲಿಕ್ಕಿಸುತ್ತಿದ್ದೆವು. ಆದರೆ ಅದು ಬದಲಾಗಿದೆ. ಅದಕ್ಕಿಂತ ಹೆಚ್ಚಾಗಿ ಸೆಲ್ಫಿ ಗೀಳಿಗೆ ಬಿದ್ದ ಜನ ಫೋಟೋಗಳನ್ನು ತೆಗೆಯುತ್ತಲೆ ಇರುತ್ತಾರೆ. ಉತ್ತಮ ವೃತ್ತಿಪರ ಕ್ಯಾಮೆರಾದೊಂದಿಗೆ ಬರುವ ಸ್ಪಷ್ಟತೆ, ನಿಖರ ಕ್ಯಾಮರಾಗಳು ಈಗ ಅನೇಕ ಫೋನ್‌ಗಳಲ್ಲಿ ಲಭ್ಯವಿದೆ.
ಆದಾಗ್ಯೂ, ಹೆಚ್ಚಿನ ಮೊಬೈಲ್ ಫೋನ್‌ಗಳು ಎಡಭಾಗದಲ್ಲಿ ಮಾತ್ರವೇ ಆ ಕ್ಯಾಮೆರಾವನ್ನು ಹೊಂದಿರುತ್ತವೆ. ಎಡಭಾಗದಲ್ಲಿ ಮಾತ್ರ ಏಕೆ ಜೋಡಿಸಲಾಗಿದೆ. ಅದು ಏಕೆ ಎಂದು ನೀವು ಎಂದಾದರೂ ಗಮನಿಸಿದ್ದೀರಾ?
ವಾಸ್ತವವಾಗಿ, ಮೊದಲ ಫೋನ್’ಗಳು ಮಧ್ಯದಲ್ಲಿ ಕ್ಯಾಮೆರಾವನ್ನು ಹೊಂದಿದ್ದವು. ನಂತರ ಕ್ರಮೇಣ ಎಲ್ಲ ಕಂಪನಿಗಳೂ ಕ್ಯಾಮೆರಾಗಳ ಜಾಗ ಮೊಬೈಲ್ ನ ಎಡಭಾಗಕ್ಕೆ ಬದಲಾದವು. ಹಾಗಾದರೆ ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಮೂಡಿದೆ. ಕಂಪನಿಗಳು ಮೊಬೈಲ್ ಎಡ ಕ್ಯಾಮೆರಾವನ್ನು ಏಕೆ ನೀಡುತ್ತವೆ? ಎಂಬುದನ್ನು ತಿಳಿಯಲು ಮುಂದೆ ಓದಿ.
ಮೊದಲ ಬಾರಿಗೆ ಸ್ಮಾರ್ಟ್’ಫೋನ್ ದೈತ್ಯ ಐಫೋನ್ ತನ್ನ ಫೋನ್’ನ ಎಡಭಾಗದಲ್ಲಿ ಕ್ಯಾಮೆರಾವನ್ನು ನೀಡಲು ಪ್ರಾರಂಭಿಸಿತು. ಇದರ ನಂತರ, ಕ್ರಮೇಣ ಅನೇಕ ಕಂಪನಿಗಳು ಅದೇ ವಿಧಾನವನ್ನು ಅಳವಡಿಸಿಕೊಂಡವು… ಕ್ಯಾಮೆರಾವನ್ನು ಫೋನ್’ನ ಎಡಭಾಗಕ್ಕೆ ಸರಿಸಿದವು. ಇದನ್ನು ಬಿಟ್ಟು ಕ್ಯಾಮೆರಾವನ್ನು ಎಡಭಾಗದಲ್ಲಿ ಇರಿಸಲು ಯಾವುದೇ ನಿಖರ ಕಾರಣವಾಗಲಿ ಅಥವಾ ವಿನ್ಯಾಸವಾಗಲಿ ಇಲ್ಲ. ಆದರೆ ಅದರ ಹಿಂದೆ ಬೇರೆಯದ್ದೇ ವೈಜ್ಞಾನಿಕ ಕಾರಣವಿದೆ ಎಂಬುದು ವಿಶೇಷ.
ಜಗತ್ತಿನಲ್ಲಿ ಹೆಚ್ಚಿನ ಜನರು ತಮ್ಮ ಎಡಗೈಯಲ್ಲಿ ಮೊಬೈಲ್ ಬಳಸುತ್ತಾರೆ. ಮೊಬೈಲ್’ನ ಹಿಂಭಾಗದಲ್ಲಿ, ಎಡಭಾಗದಲ್ಲಿ ಅಳವಡಿಸಲಾಗಿರುವ ಕ್ಯಾಮರಾದಿಂದ ಫೋಟೋಗಳನ್ನು ತೆಗೆಯುವುದು ಅಥವಾ ವೀಡಿಯೊಗಳನ್ನು ಚಿತ್ರೀಕರಿಸುವುದು ಸುಲಭ. ಹಾಗೆಯೇ ಮೊಬೈಲ್ ತಿರುಗಿಸಿ ಲ್ಯಾಂಡ್ ಸ್ಕೇಪ್ ಮೋಡ್ ನಲ್ಲಿ ಫೋಟೋ ತೆಗೆಯಬೇಕಾದಾಗ ಮೊಬೈಲ್ ಕ್ಯಾಮೆರಾ ಎದ್ದು ನಿಲ್ಲುತ್ತದೆ. ಇದರಿಂದಾಗಿ ಲ್ಯಾಂಡ್’ಸ್ಕೇಪ್ ಮೋಡ್’ನಲ್ಲಿಯೂ ಫೋಟೋವನ್ನು ಸುಲಭವಾಗಿ ತೆಗೆಯಬಹುದು. ಈ ಕಾರಣಗಳಿಗಾಗಿ, ಕ್ಯಾಮೆರಾವನ್ನು ಮೊಬೈಲ್’ನ ಎಡಭಾಗದಲ್ಲಿ ಇರಿಸಲಾಗುತ್ತದೆ.