ಮನೆ ತಂತ್ರಜ್ಞಾನ ಮೊಬೈಲ್ ಡೇಟಾ ವರ್ಕ್ ಆಗ್ತಿಲ್ವಾ ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಮೊಬೈಲ್ ಡೇಟಾ ವರ್ಕ್ ಆಗ್ತಿಲ್ವಾ ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

0

ಕೆಲವೊಮ್ಮೆ ನಮ್ಮ ಮೊಬೈಲ್ ಫೋನ್ ನಲ್ಲಿ ನಿನ್ನೆ ಮೊನ್ನೆ ತಾನೇ ಹೊಸದಾಗಿ ಡೇಟಾ ಪ್ಯಾಕ್ ಹಾಕಿಸಿದ್ದರೂ ಸಹ ಮೊಬೈಲ್ ನಲ್ಲಿರುವ ಡೇಟಾ ಸರಿಯಾಗಿ ಕೆಲಸ ಮಾಡುವುದಿಲ್ಲ. ಈಗಂತೂ ನಮ್ಮ ಭಾರತದಲ್ಲಿ ಜಿಯೋ, ಏರ್‌ಟೆಲ್ ಮತ್ತು ವಿಐ 5ಜಿ ಸೇವೆಗಳನ್ನು ಸಹ ಪ್ರಾರಂಭಿಸಲು ಸಜ್ಜಾಗುತ್ತಿವೆ. 4ಜಿ ಅಥವಾ 3ಜಿ ಸಹ ಸರಿಯಾಗಿ ಕೆಲಸ ಮಾಡದ ಪ್ರದೇಶಗಳು ನಮ್ಮ ದೇಶದಲ್ಲಿ ಕೆಲವು ಇವೆ. ನಿಮ್ಮ ಮೊಬೈಲ್ ಫೋನ್ ನಲ್ಲಿ ನೀವು ಸಹ ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಕೆಳಗಿನ ತ್ವರಿತ ಪರಿಹಾರಗಳನ್ನು ಒಮ್ಮೆ ಟ್ರೈ ಮಾಡಿ.

ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ
ನಿಧಾನಗತಿಯ ಸಂಪರ್ಕದ ಸಂದರ್ಭದಲ್ಲಿ ಮೊಬೈಲ್ ಡೇಟಾ ವೇಗವನ್ನು ಹೆಚ್ಚಿಸಲು ಇದು ಅತ್ಯಂತ ಸರಳ ಮಾರ್ಗಗಳಲ್ಲಿ ಒಂದಾಗಿದೆ. ನೀವು ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಬಹುದು ಮತ್ತು ಕೆಲವು ಸೆಕೆಂಡುಗಳ ನಂತರ ಅದನ್ನು ಆಫ್ ಮಾಡಿ. ಈ ಪ್ರಕ್ರಿಯೆಯು ಮೊಬೈಲ್ ನೆಟ್‌ವರ್ಕ್ ಅನ್ನು ತ್ವರಿತವಾಗಿ ಮರು ಹೊಂದಿಸಲು ಮತ್ತು ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.

ಮೊಬೈಲ್ ನೆಟ್ವರ್ಕ್ ಅನ್ನು ‘ಆಟೋಮೋಡ್ ಗೆ ಹಾಕಿ
ಮೊಬೈಲ್ ಡೇಟಾ ನೆಟ್‌ವರ್ಕ್ ಗಳು ಸಿಮ್ ಆಧಾರದ ಮೇಲೆ ಮೂರು ಅಥವಾ ಕಡಿಮೆ ನೆಟ್‌ವರ್ಕ್ ಆಯ್ಕೆಗಳನ್ನು ಒದಗಿಸುತ್ತವೆ. ಕೆಲವು ಸಂದರ್ಭಗಳಲ್ಲಿ 4ಜಿ ನೆಟ್‌ವರ್ಕ್ ಇರಬಹುದು ಆದರೆ ಉತ್ತಮ ವೇಗವನ್ನು ಒದಗಿಸುವಷ್ಟು ಪ್ರಬಲವಾಗಿರುವುದಿಲ್ಲ ಮತ್ತು ಕೆಲವೊಮ್ಮೆ 2ಜಿ ಮತ್ತು 3ಜಿ ನೆಟ್‌ವರ್ಕ್ ಉತ್ತಮ ವೇಗವನ್ನು ಒದಗಿಸಬಹುದು. ಸೆಟ್ಟಿಂಗ್ ಗಳಲ್ಲಿನ “ಮೊಬೈಲ್ ಡೇಟಾ” ವಿಭಾಗಕ್ಕೆ ಹೋಗಿ ಮತ್ತು 2ಜಿ, 3ಜಿ, 4ಜಿ ಆಟೋಗೆ ಬದಲಾಯಿಸಿ. ಈ ಸೆಟ್ಟಿಂಗ್ ಸ್ವಯಂಚಾಲಿತವಾಗಿ ಲಭ್ಯವಿರುವ ಅತ್ಯುತ್ತಮ ನೆಟ್‌ವರ್ಕ್ ಅನ್ನು ಗುರುತಿಸುತ್ತದೆ ಮತ್ತು ಅದಕ್ಕೆ ಬದಲಾಗುತ್ತದೆ. ಇದು ಡೇಟಾ ವೇಗವನ್ನು ಹೆಚ್ಚಿಸುತ್ತದೆ.

ನಿಮ್ಮ ಮೊಬೈಲ್ ಫೋನ್ ಅನ್ನು ರೀ ಸ್ಟಾರ್ಟ್ ಮಾಡಿ
ಈಗ, ನಮ್ಮಲ್ಲಿ ಹೆಚ್ಚಿನವರು ಇದನ್ನೇ ಮಾಡುತ್ತಾರೆ ಎಂದು ಹೇಳಬಹುದು. ಮೊಬೈಲ್ ಸಾಧನವನ್ನು ಒಮ್ಮೆ ರೀ ಸ್ಟಾರ್ಟ್ ಮಾಡುತ್ತಾರೆ ಮತ್ತು ಹೀಗೆ ಮರು ಪ್ರಾರಂಭಿಸುವುದರಿಂದ ನೆಟ್‌ವರ್ಕ್ ಪ್ರಕ್ರಿಯೆಗಳು ಸೇರಿದಂತೆ ಎಲ್ಲಾ ಸಿಸ್ಟಂ ಪ್ರಕ್ರಿಯೆಗಳನ್ನು ಮರು ಪ್ರಾರಂಭವಾಗುತ್ತವೆ. ಇದು ಮೊಬೈಲ್ ಡೇಟಾಗೆ ಅಡ್ಡಿಯಾಗಬಹುದಾದ ಎಲ್ಲಾ ನೆಟ್‌ವರ್ಕ್ ಸಂಬಂಧಿತ ಸಮಸ್ಯೆಗಳು ಅಥವಾ ಸೆಟ್ಟಿಂಗ್ ಗಳನ್ನು ಸರಿಪಡಿಸುತ್ತದೆ.

ಸಿಮ್ಕಾರ್ಡ್ಅನ್ನು ಒಮ್ಮೆ ಸ್ವಚ್ಛಗೊಳಿಸಿ
ಕೆಲವೊಮ್ಮೆ ಸಿಮ್‌ಕಾರ್ಡ್ ತನ್ನ ಪೋರ್ಟ್ ನಲ್ಲಿರುವಾಗ ಧೂಳು ಆಗಿರುತ್ತದೆ ಮತ್ತು ನಾವು ಅದನ್ನು ಮೊದಲು ಹೊರ ತೆಗೆಯಬೇಕು ಮತ್ತು ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.

ಎಪಿಎನ್ ಅನ್ನು ಮರು ಸೆಟ್ ಮಾಡಿ

ಮೊಬೈಲ್ ನಲ್ಲಿ ಸೆಟ್ಟಿಂಗ್ ಗೆ ಹೋಗಿ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ತೆರೆಯಿರಿ.

ನಿಮ್ಮ ನೆಟ್‌ವರ್ಕ್ ಹೆಸರಿನ ಮೇಲೆ ಕ್ಲಿಕ್ ಮಾಡಿ.

‘ಆಕ್ಸೆಸ್ ಪಾಯಿಂಟ್ ನೇಮ್ಸ್’ ಆಯ್ಕೆಗಾಗಿ ಪರಿಶೀಲಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಐಕಾನ್ ಗಳಿಂದ ‘ರೀಸೆಟ್ ಆಕ್ಸೆಸ್ ಪಾಯಿಂಟ್ಸ್’ ಅನ್ನು ಆಯ್ಕೆ ಮಾಡಿ.

ಮೊಬೈಲ್ ಅನ್ನು ಮರು ಪ್ರಾರಂಭಿಸಿ ಮತ್ತು ಮೊಬೈಲ್ ಡೇಟಾವನ್ನು ಒಮ್ಮೆ ಪರೀಕ್ಷಿಸಿ.

ನೆಟ್ವರ್ಕ್ ಸೆಟ್ಟಿಂಗ್ ಗಳನ್ನು ಮರು ಹೊಂದಿಸಿ
ಇಡೀ ಮೊಬೈಲ್ ಫೋನ್ ನನ್ನೆ ರೀ ಸೆಟ್ ಮಾಡಿಕೊಳ್ಳಿರಿ ಮತ್ತು ಅನೇಕ ಸಾಧನಗಳು ನೆಟ್‌ವರ್ಕ್ ಸೆಟ್ಟಿಂಗ್ ಗಳನ್ನು ಮರು ಹೊಂದಿಸುವ ಆಯ್ಕೆಯನ್ನು ನೀಡಿರುತ್ತವೆ. ಸೆಟ್ಟಿಂಗ್ಸ್ ಮತ್ತು ಬ್ಯಾಕಪ್ ಮತ್ತು ರೀಸೆಟ್ ಮೆನುವಿಗೆ ಹೋಗಿ. ನಂತರ, ರೀಸೆಟ್ ನೆಟ್‌ವರ್ಕ್ ಸೆಟ್ಟಿಂಗ್ಸ್ ಆಯ್ಕೆಗಾಗಿ ಪರಿಶೀಲಿಸಿ ಮತ್ತು ಮೊಬೈಲ್ ಡೇಟಾವನ್ನು ಪರೀಕ್ಷಿಸಿ.
ಮೊಬೈಲ್ ಡೇಟಾ ಮಿತಿಯನ್ನು ಪರಿಶೀಲಿಸಿ
ನೆಟ್‌ವರ್ಕ್ ಸೆಟ್ಟಿಂಗ್ ಗಳಿಗೆ ಹೋಗಿ ಮತ್ತು ಡೇಟಾ ಬಳಕೆಗಾಗಿ ಪರಿಶೀಲಿಸಿ. ಡೇಟಾ ಮಿತಿ ಆಯ್ಕೆ ಇರುತ್ತದೆ, ಅದನ್ನು ನಿಷ್ಕ್ರಿಯಗೊಳಿಸಿ ಅಥವಾ ನಿಮ್ಮ ಆಯ್ಕೆಗೆ ಅನುಗುಣವಾಗಿ ತಿಂಗಳಿಗೆ ಮಿತಿಯನ್ನು ನಿಗದಿಪಡಿಸಿ.

ಸಿಮ್ಕಾರ್ಡ್ ಅನ್ನು ಬೇರೊಂದು ಮೊಬೈಲ್ ಗೆ ಹಾಕಿ ಪರಿಶೀಲಿಸಿ
ಕೆಲವು ಸಂದರ್ಭಗಳಲ್ಲಿ, ಸಿಮ್ ಒಂದು ನಿರ್ದಿಷ್ಟ ಮೊಬೈಲ್ ಫೋನ್ ನಲ್ಲಿ ಕೆಲಸ ಮಾಡದಿರಬಹುದು ಮತ್ತು ಮೊಬೈಲ್ ಡೇಟಾವು ಬೇರೆ ಮೊಬೈಲ್ ನಲ್ಲಿ ಸರಾಗವಾಗಿ ಕಾರ್ಯ ನಿರ್ವಹಿಸಬಹುದು. ಹಾಗಿದ್ದಲ್ಲಿ, ಮೊಬೈಲ್ ಫೋನ್ ನ ಫ್ಯಾಕ್ಟರಿ ಮರು ಹೊಂದಿಸಲು ಪ್ರಯತ್ನಿಸಿ ಅಥವಾ ಅದನ್ನು ಪತ್ತೆ ಹಚ್ಚಲು ಅದನ್ನು ಸೇವಾ ಕೇಂದ್ರಕ್ಕೆ ಕೊಂಡೊಯ್ಯಿರಿ.

ಒಮ್ಮೆ ನೀವು ಈ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿದ ನಂತರ, ಇಂಟರ್ನೆಟ್ ವೇಗವು ಸಾಕಷ್ಟು ವೇಗವಾಗಿದೆಯೇ ಎಂದು ಪರಿಶೀಲಿಸಿ. ನೀವು ಯೂಟ್ಯೂಬ್ ನಲ್ಲಿ ಸಂಗೀತ ಅಥವಾ ವೀಡಿಯೋವನ್ನು ಪ್ಲೇ ಮಾಡಬಹುದು ಅಥವಾ ಗೂಗಲ್ ಮ್ಯಾಪ್ ಗಳಂತಹವುಗಳನ್ನು ಒಮ್ಮೆ ಚಲಾಯಿಸಿ ನೋಡಿ ಇಂಟರ್ನೆಟ್ ವೇಗವನ್ನು ಪರೀಕ್ಷಿಸಬಹುದು.