ಮನೆ ಯೋಗ ತಪ್ಪಾಗಿ ಮಾಡುವ ಯೋಗವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು..!

ತಪ್ಪಾಗಿ ಮಾಡುವ ಯೋಗವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು..!

0

ನಾವು ಯೋಗ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮತ್ತು ನಮ್ಮಲ್ಲಿನ ನಾನಾ ಸಮಸ್ಯೆಗಳಿಗೆ ಯೋಗವು ನೈಸರ್ಗಿಕ ಚಿಕಿತ್ಸೆ ನೀಡಬಲ್ಲದು. ಆದರೆ ಇದೇ ಯೋಗವನ್ನು ತಪ್ಪಾಗಿ ಮಾಡಿದಲ್ಲಿ, ಅದು ನಮಗೆ ಹಾನಿಯನ್ನೂ ಉಂಟು ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ ನೀವು ಮಾಡುವ ಸಾಮಾನ್ಯ ತಪ್ಪುಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ತಿಳಿದುಕೊಳ್ಳಿ.

ಪ್ರತಿವರ್ಷ ಯೋಗವನ್ನು ಜೂನ್ 21 ರಂದು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಯೋಗದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಯೋಗವು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಮನಸ್ಸನ್ನು ಶಾಂತ ಮತ್ತು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ದಿನನಿತ್ಯ ಯೋಗಾಭ್ಯಾಸವನ್ನು ನಾವು ನಮ್ಮ ಸಂಗಾತಿ ಎಂದೇ ಪರಿಗಣಿಸುತ್ತೇವೆ. ಆದರೆ ಇದರಿಂದಲೂ ಕೆಲವೊಮ್ಮೆ ಹಾನಿಯಾಗಬಹುದು ಎನ್ನುವುದು ನಿಮಗೆ ಗೊತ್ತೆ? ಹೌದು ಯೋಗವನ್ನು ತಪ್ಪಾಗಿ ಮಾಡಿದಲ್ಲಿ ಅದು ನಿಮಗೆ ಪ್ರಯೋಜನ ನೀಡುವ ಬದಲಿಗೆ ಹಾನಿಯನ್ನುಂಟು ಮಾಡುತ್ತದೆ.

​ಯೋಗ ಮಾಡುವಾಗ ನೀವು ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತಪ್ಪಾದ ಅಭ್ಯಾಸವು ಗಾಯಗಳು, ಸ್ನಾಯು ಸೆಳೆತ ಅಥವಾ ದೀರ್ಘಕಾಲೀನ ಕೀಲು ಸಮಸ್ಯೆಗಳಿಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಆರಂಭಿಕರು ತಮ್ಮ ದೇಹದ ಮಿತಿಗಳನ್ನು ಅರ್ಥಮಾಡಿಕೊಳ್ಳದೆ ಕಷ್ಟಕರವಾದ ಭಂಗಿಗಳಿಗೆ ಧಾವಿಸಬಹುದು ಅಥವಾ ಸರಿಯಾದ ಉಸಿರಾಟದ ತಂತ್ರಗಳ ಮಹತ್ವವನ್ನು ನಿರ್ಲಕ್ಷಿಸಬಹುದು ಇವೆಲ್ಲವೂ ನಿಮಗೆ ಹಾನಿಯನ್ನುಂಟು ಮಾಡಬಹುದು ಹಾಗಾದರೆ ನೀವು ಯಾವ ತಪ್ಪುಗಳನ್ನು ಮಾಡಬಾರದು.

ಇಂದು ಅನೇಕ ಜನರು ಇಂಟರ್ ನೆಟ್ ಮೊಬೈಲ್ ಆಪ್ ಗಳು ಇತ್ಯಾದಿಗಳ ಮೂಲಕ ಸ್ವತಃ ತಾವಾಗಿಯೇ ಯೋಗಾಭ್ಯಾಸ ಮಾಡುವುದನ್ನು ನಾವು ಕಾಣಬಹುದು.ಯಾವುದೇ ಯೋಗ ಭಂಗಿಯಾಗಲಿ ಅದನ್ನು ಮಾಡಲು ಸರಿಯಾದ ರೀತಿ ಇರುತ್ತದೆ ಮತ್ತು ಇದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗುತ್ತದೆ. ಯೋಗವನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ಮಾಡದಿದ್ದರೆ, ಆಸನಗಳನ್ನು ನೀವು ತಪ್ಪಾಗಿ ಮಾಡಬಹುದು. ಇದು ಸ್ನಾಯುಗಳ ಒತ್ತಡ, ಕೀಲು ನೋವು ಮತ್ತು ಬೆನ್ನುಮೂಳೆಯ ಸಮಸ್ಯೆಗಳನ್ನು ಉಂಟುಮಾಡಬಹುದು, ಇದು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ.

ಸಾಮಾನ್ಯವಾಗಿ ಜನರು ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ ತಕ್ಷಣ ಯೋಗ ಮಾಡಲು ಪ್ರಾರಂಭಿಸುತ್ತಾರೆ ಇದು ಎರಡೂ ಸಂದರ್ಭಗಳಲ್ಲಿ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಯೋಗವನ್ನು ಮಾಡಲು ಸರಿಯಾದ ಸಮಯವೆಂದರೆ ಖಾಲಿಹೊಟ್ಟೆಯಲ್ಲಿ ಅಥವಾ ಲಘು ಊಟ ಸೇವಿಸಿದ 2-3 ಗಂಟೆಗಳ ನಂತರ. ನೀವು ತಪ್ಪ ಸಮಯದಲ್ಲಿ ಯೋಗ ಮಾಡಿದರೆ ಅದು ತಲೆ ತಿರುಗುವಿಕೆ ವಾಂತಿ ಅಥವಾ ದೇಹದಲ್ಲಿ ಆಯಾಸದಂತಹ ಭಾವನೆಯನ್ನುಂಟು ಮಾಡಬಹುದು.

​ಉಸಿರಾಟದ ವ್ಯಾಯಾಮವು ಯೋಗದಲ್ಲಿ ಅತಿ ಮುಖ್ಯ ಅಂಗವಾಗಿದೆ. ಇದರಲ್ಲಿ ಉಸಿರು ಒಳಗೆಳೆದುಕೊಳ್ಳುವುದು ಮತ್ತು ಹೊರ ಬಿಡುವ ಪ್ರಕ್ರಿಯೆ ಇರುತ್ತದೆ. ನೀವು ಇದನ್ನು ತಪ್ಪಾದ ರೀತಿಯಲ್ಲಿ ಮಾಡಿದಾಗ ಅಂದರೆ ಉಸಿರಾಟದ ಕ್ರಿಯೆಯನ್ನು ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಉಸಿರಾಡಿದಲ್ಲಿ, ಅಥವಾ ಅನಗತ್ಯವಾಗಿ ಉಸಿರನ್ನು ಹಿಡಿದಿಟ್ಟುಕೊಂಡಾಗ ಅದು ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ತಲೆನೋವು, ಹೆದರಿಕೆ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಪ್ರಾಣಾಯಾಮ ಮಾಡುವಾಗ, ಆಳವಾದ, ಶಾಂತ ಮತ್ತು ಲಯಬದ್ಧವಾದ ಉಸಿರನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ನೀವು ಯಾವಾಗಾದರೊಮ್ಮೆ ನಿಮಗೆ ಮನಸ್ಸಾದಾಗ ಅಥವಾ ಯೋಗದಿನದಂದು ಮಾತ್ರ ಯೋಗ ಮಾಡಿ ನಂತರದ ದಿನಗಳಲ್ಲಿ ಯೋಗಾಭ್ಯಾಸ ಮಾಡದೇ ಇದ್ದಲ್ಲಿ ಅದು ಯಾವುದೇ ಹೆಚ್ಚಿನ ಪ್ರಯೋಜನಗಳನ್ನು ನಿಮಗೆ ನೀಡಲಾರದು. ಅದಕ್ಕಾಗಿ ಯೋಗಾಭ್ಯಾಸ ಮಾಡಲು ಸ್ಥಿರತೆ ಮುಖ್ಯವಾಗುತ್ತದೆ. ಪ್ರತಿದಿನ ನಿಯಮಿತವಾಗಿ ಮಾಡಿದಾಗ ಮಾತ್ರ ಇದರ ಪ್ರಯೋಜನಗಳನ್ನು ನೀವು ಪಡೆಯಬಹುದು. ನಿರಂತರ ಅಭ್ಯಾಸ ಮಾತ್ರ ದೇಹ ಮತ್ತು ಮನಸ್ಸಿನಲ್ಲಿ ಶಾಂತಿಯನ್ನು ತರುತ್ತದೆ. ಇಲ್ಲದಿದ್ದರೆ, ದೇಹದ ಲಯವು ತೊಂದರೆಗೊಳಗಾಗಬಹುದು ಮತ್ತು ಯೋಗದ ನಿಜವಾದ ಉದ್ದೇಶವು ಅಪೂರ್ಣವಾಗಿ ಉಳಿಯುತ್ತದೆ.