ಮನೆ ಯೋಗಾಸನ ದೋಲಾಸನ

ದೋಲಾಸನ

0

ದೋಲಾಸನವನ್ನು ಸಾಮಾನ್ಯವಾಗಿ ನೌಕಾಸನ ಎಂದೂ ಕರೆಯುವರು.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಪ್ರಾರಂಭದಲ್ಲಿ ಕೈಕಾಲುಗಳನ್ನು ಚಾಚಿ, ಹೊಟ್ಟೆಯನ್ನು ನೆಲಕ್ಕೆ ತಗಲಿಸಿ ನೆಲದ ಮೇಲೆ ನೇರವಾಗಿ ಬೋರಲಾಗಿ ಮಲಗಬೇಕು.

2)   ಅನಂತರ ದೀರ್ಘವಾಗಿ  ಉಸಿರನ್ನು ಒಳಕ್ಕೆ ತೆಗೆದುಕೊಂಡು ಚಿತ್ರದಲ್ಲಿ ತೋರಿಸಿರುವಂತೆ ಸಾಧ್ಯವಾದಷ್ಟು ಮೇಲಕ್ಕೆ ತನ್ನ ಎರಡೂ ಕೈ – ಕಾಲುಗಳನ್ನು ಎತ್ತಬೇಕು. ಅಂದರೆ ದೋಲಾಸನದ ಪೂರ್ಣಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಬಿದ್ದಿರುತ್ತದೆ. ಸುಮಾರು ಒಂದರಿಂದ ಒಂದೂವರೆ ನಿಮಿಷಗಳ ಕಾಲ ಆಸನದ ಸ್ಥಿತಿಯಲ್ಲಿ ಇದ್ದು ಅನಂತರ ಮೊದಲಿನ ಸ್ಥಿತಿಗೆ ಬರಹುದು. ಪ್ರಾರಂಭದಲ್ಲಿ ಈ ಆಸನವನ್ನು ಮಾಡುವುದು ಕಷ್ಟವೆನಿಸುತ್ತದೆ. ಆದರೂ ಹೆಚ್ಚು ಶ್ರಮ ಹಾಕಿ ಅಭ್ಯಾಸ ಮಾಡುವುದು ಉತ್ತಮ. ಹೊಟ್ಟೆಗೆ ಸಂಬಂಧಿಸಿದ ಅನೇಕ ತೊಂದರೆಗಳು ದೋಲಾಸನದ ಅಭ್ಯಾಸದಿಂದಲೇ ದೂರವಾಗುವುವು.

ಲಾಭಗಳು:

ದೋಲಾಸನದ ಅಭ್ಯಾಸದಿಂದ ಹೊಟ್ಟೆ ತೆಳುವಾಗುವುದು, ಮಲ ಬದ್ಧತೆ ನಿವಾರಣೆಯಾಗುತ್ತದೆ. ಹೊಟ್ಟೆ, ಎದೆ, ಬೆನ್ನು, ತೊಡೆ ಮತ್ತು ಸೊಂಟಗಳ ಅನೇಕ ದೋಷಗಳು ದೂರವಾಗುತ್ತದೆ.

ಹಿಂದಿನ ಲೇಖನಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಈ ಆಹಾರಗಳನ್ನು ಸೇವಿಸಿ
ಮುಂದಿನ ಲೇಖನಹಾಸ್ಯ