ಮನೆ ಮನರಂಜನೆ ಶುಕ್ರವಾರ ಡಾಲಿ ಧನಂಜಯ್ ನಟನೆಯ ಜೀಬ್ರಾ ಚಿತ್ರ ಬಿಡುಗಡೆ

ಶುಕ್ರವಾರ ಡಾಲಿ ಧನಂಜಯ್ ನಟನೆಯ ಜೀಬ್ರಾ ಚಿತ್ರ ಬಿಡುಗಡೆ

0

ಡಾಲಿ ಧನಂಜಯ್‌ ಹಾಗೂ ತೆಲುಗಿನ ಸತ್ಯದೇವ್‌ ನಟನೆಯ ಜೀಬ್ರಾ ಚಿತ್ರದ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಈಗಾಗಲೇ ಟೀಸರ್‌, ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಡಾಲಿ ಧನಂಜಯ್‌ ಕೂಡಾ ನಿರೀಕ್ಷೆ ಕಂಗಳೊಂದಿಗೆ ಈ ಸಿನಿಮಾದತ್ತ ದೃಷ್ಟಿ ನೆಟ್ಟಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರ ಮಾತು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಬ್ಯಾಂಕ್‌ ಕಥಾನಕ ಸುತ್ತ ಸಾಗುವ ಸಿನಿಮಾ ತುಂಬಾ ರೋಚಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ಮಾತು ಕೇಳಿಬರುತ್ತಿದೆ.

Join Our Whatsapp Group

ಬ್ಯಾಂಕ್‌ ವ್ಯವಹಾರದ ಕುರಿತಾದ ಸಣ್ಣ ಅಂಶವೊಂದನ್ನು ಇಟ್ಟುಕೊಂಡು ಇಡೀ ಸಿನಿಮಾ ಕಥೆ ಬರೆಯಲಾಗಿದೆ. ಚಿತ್ರದಲ್ಲಿ ಸತ್ಯರಾಜ್‌, ಸತ್ಯ ಅಕ್ಕಲಾ, ಜೆನ್ನಿಫ‌ರ್‌ ಪಿಕ್ಕಿನಾಟೊ, ಸುನಿಲ್‌, ಪ್ರಿಯಾ ಭವಾನಿ ಶಂಕರ್‌, ಡಾಲಿ ಧನಂಜಯ್‌ ಮತ್ತು ಸತ್ಯ ದೇವ್‌ ಅವರು ನಟಿಸಿದ್ದಾರೆ.

“ಸಿನಿಮಾವನ್ನು ಕಟ್ಟಿಕೊಟ್ಟ ರೀತಿಯೇ ತುಂಬಾ ಮಜವಾಗಿದೆ. ಈ ತರಹನೂ ಆಗಬಹುದಾ ಎಂಬ ಯೋಚನೆ ಬರುತ್ತದೆ. ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ’ ಎನ್ನುತ್ತಾರೆ ಧನಂಜಯ್‌.

ಜೀಬ್ರಾ ಸಿನಿಮಾವನ್ನ ಈಶ್ವರ್‌ ಕಾರ್ತಿಕ್‌ ನಿರ್ದೇಶನ ಮಾಡಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್‌ ಕಂಟೆಂಟ್‌ ಇರುವ ಚಿತ್ರ ಇದಾಗಿದೆ. ಪದ್ಮಜಾ ಫಿಲಂಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಓಲ್ಡ್ ಟೌನ್‌ ಪಿಕ್ಚರ್ಸ್‌ ಬ್ಯಾನರ್‌ಗಳ ಅಡಿಯಲ್ಲಿ ಎಸ್‌.ಎನ್‌ ರೆಡ್ಡಿ, ಎಸ್‌ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್‌ ಸುಂದರಂ ನಿರ್ಮಾಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್‌ ಅವರ ಛಾಯಾಗ್ರಹಣವಿದೆ. ಅನಿಲ್‌ ಕ್ರಿಶ್‌ ಸಂಕಲನ, ಮೀರಾಖ್‌ ಸಂಭಾಷಣೆ ಸಿನಿಮಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಧನಂಜಯ್‌ ಜೋಡಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸಿದ್ದಾರೆ.