ಮನೆ Uncategorized ಕೌಟುಂಬಿಕ ಕಲಹ: ಪತಿಯಿಂದಲೇ ಪತ್ನಿಗೆ ಚಾಕು ಇರಿತ

ಕೌಟುಂಬಿಕ ಕಲಹ: ಪತಿಯಿಂದಲೇ ಪತ್ನಿಗೆ ಚಾಕು ಇರಿತ

0

ನಾಗಮಂಗಲ : ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತಿಯೇ ಪತ್ನಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಚಿಣ್ಯದ ಸಾರ್ವಜನಿಕ ಆಸ್ಪತ್ರೆ ಎದುರು ನಡೆದಿದೆ.

Join Our Whatsapp Group

ತಾಲೂಕಿನ ಗಂಗವಾಡಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಎಂಬಾತ ತನ್ನ ಪತ್ನಿ ಗೌರಮ್ಮನಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಗಾಯಾಳು ಗೌರಮ್ಮಳಿಗೆ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತಿದ್ದು, ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.