ಮನೆ ರಾಜ್ಯ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆ

ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆ

0

ನವದೆಹಲಿ(New Delhi): ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಬುಧವಾರ ₹ 50ರಷ್ಟು ಹೆಚ್ಚಿಸಲಾಗಿದ್ದು,  ದೆಹಲಿಯಲ್ಲಿ 14.2 ಕೆ.ಜಿ ತೂಕದ ಸಿಲಿಂಡರ್‌ ದರ ₹ 1,053ಕ್ಕೆ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ 14.2 ಕೆ.ಜಿ ತೂಕದ ಸಿಲಿಂಡರ್‌ ದರ ₹ 1,005.50 ರಷ್ಟಿತ್ತು. ಇನ್ನು ಮುಂದೆ ₹1055.50 ಆಗಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹1,053ಕ್ಕೆ ತಲುಪಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವು ಜುಲೈ 6ರಿಂದ ಅನ್ವಯವಾಗುವಂತೆ ₹8.50ರಷ್ಟು ಕಡಿಮೆ ಆಗಿದೆ. 19 ಕೆ.ಜಿ. ತೂಕದ ಸಿಲಿಂಡರ್‌ ದರ ₹ 2,100ಕ್ಕೆ ತಗ್ಗಿದೆ.