ರಾಯಚೂರು : ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ವಿಚಾರದಲ್ಲಿ ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಪಾರ್ಟಿ ಏನು ಹೇಳುತ್ತದೆಯೋ ಅದರಂತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗ್ತಿವಿ ಅಂತ ನಾನು ಸಿದ್ದರಾಮಯ್ಯ ಹೇಳಿದ್ದೇವೆ. ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂತ್ರಾಲಯದಲ್ಲಿ ದೇವಾಲಯಕ್ಕೆ ಭೇಟಿ ಬಳಿಕ ಮಾಧಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಮುಂದಿನ ಮುಖ್ಯಮಂತ್ರಿ ಕುರಿತು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಅದರ ಬಗ್ಗೆ ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ. ಅದನ್ನ ನನ್ನ ಕೇಳಿದ್ರೆ ನಾನು ಏನು ಹೇಳಲಿ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ .
ನನಗೆ ಪಕ್ಷ ಎಲ್ಲಾ ಕೊಟ್ಟಿದೆ. ಪಕ್ಷದ ಅಧ್ಯಕ್ಷನಾಗಿದ್ದೇನೆ. ಡಿಸಿಎಂ ಆಗಿ ರಾಜ್ಯದಲ್ಲಿ ಇತಿಹಾಸ ಬರೆಯುತ್ತಿದ್ದೇನೆ. ದೊಡ್ಡ ದೊಡ್ಡ ಕೆಲಸ ನಿಭಾಯಿಸಿದ್ದೇನೆ. ನೀರಾವರಿ ಕ್ಷೇತ್ರದಲ್ಲಿ ಇತಿಹಾಸ ಬರಿತಿದಿನಿ. ಮಹಾದಾಯಿ, ಮೇಕೆದಾಟು ಹೋರಾಟ ಮಾಡಿದಿನಿ. ಪಕ್ಷ ನನಗೆ ಏನೇನು ಕೊಡಬೇಕು ಎಲ್ಲಾ ಕೊಟ್ಟಿದೆ ಎಂದಿದ್ದಾರೆ.
ಬೆಳಗಾವಿಯ ರಾಯಬಾಗ ತಾಲೂಕಿನ ಕಪಲಗುದ್ದಿ ಗ್ರಾಮದಲ್ಲಿ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ಸಚಿವ ಸತೀಶ ಜಾರಕಿಹೊಳಿಯವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಮುನ್ಸೂಚನೆಯನ್ನ ನೀಡಿದ್ದರು.
ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ ಆಲೋಚನೆ ಇರುವ ನಾಯಕರು ಬೇಕು. ಸತೀಶ್ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದಿದ್ದರು.














