ಮನೆ ಆರೋಗ್ಯ ನವರಾತ್ರಿ ಹಬ್ಬದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದಂತೆ: ಅದಕ್ಕೆ ಕಾರಣ ಇಲ್ಲಿದೆ

ನವರಾತ್ರಿ ಹಬ್ಬದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದಂತೆ: ಅದಕ್ಕೆ ಕಾರಣ ಇಲ್ಲಿದೆ

0

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಹಾರ ಪದ್ಧತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ಜನರು ಹೇಗೆ ಭಯ-ಭಕ್ತಿಯಿಂದ ದೇವಿಯ ಪೂಜೆಗೆ ಸಂಪೂರ್ಣ ಒಂಬತ್ತು ದಿನಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ, ಅಷ್ಟೇ ತಮ್ಮ ಆಹಾರ ಪದ್ಧತಿಯ ವಿಚಾರವಾಗಿ ಕೂಡ ಹೆಚ್ಚು ಗಮನ ಕೊಡುತ್ತಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇಂತಹ ದೊಡ್ಡ ದೊಡ್ಡ ಹಬ್ಬಗಳನ್ನು ತುಂಬಾ ಕಟ್ಟು ನಿಟ್ಟಾಗಿ ಆಚರಣೆ ಮಾಡುತ್ತಾರೆ. ಸ್ವಲ್ಪವೂ ಕೂಡ ನಿಯಮಗಳನ್ನು ಹೊರತು ಪಡಿಸಿ ಹಬ್ಬದ ಆಚರಣೆಗೆ ಮುಂದಾಗುವುದಿಲ್ಲ. ನವರಾತ್ರಿ ಹಬ್ಬದ ಆಹಾರ ಪದ್ಧತಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನ ಬಾರದು ಎಂಬ ಮಾತಿದೆ.  ಇದಕ್ಕೆ ಕಾರಣ ಇಲ್ಲಿದೆ.

ಆಯುರ್ವೇದ ಶಾಸ್ತ್ರದ ಪ್ರಕಾರ

• ಆಯುರ್ವೇದ ಶಾಸ್ತ್ರದ ಪ್ರಕಾರ ಸಾತ್ವಿಕ ಆಹಾರ ಸುಲಭವಾಗಿ ದೇಹದಲ್ಲಿ ಜೀರ್ಣವಾಗುತ್ತದೆ. ಕಾಯಿಲೆಯನ್ನು ವಾಸಿಮಾಡುವ ಆಹಾರ ಇದಾಗಿದ್ದು, ಸಾಂಪ್ರದಾಯಿಕ ಪದ್ಧತಿಯಲ್ಲಿ ತಯಾರು ಮಾಡಲಾಗುತ್ತದೆ.

• ಆದರೆ ಮನುಷ್ಯನ ದೈಹಿಕ ಆರೋಗ್ಯದ ಸ್ಥಿತಿಯ ಬಗ್ಗೆ ಹೇಳುವುದಾದರೆ, ತಿಂದ ಆಹಾರ ನಿಧಾನವಾಗಿ ದೇಹದಲ್ಲಿ ಜೀರ್ಣವಾಗಬೇಕು ಮತ್ತು ಹೆಚ್ಚು ಸಮಯ ತೆಗೆದುಕೊಂಡು ಬಂದಿರುವ ಕಾಯಿಲೆಯನ್ನು ವಾಸಿ ಮಾಡಬೇಕು.

• ಇದು ಸಾಂಪ್ರದಾಯಿಕ ಆಹಾರ ಪದ್ಧತಿಯ ಮೂಲಕ ಇರುವುದರಿಂದ ದೇಹದಲ್ಲಿ ಮೆಟ ಬೋಲಿಸಂ ಪ್ರಕ್ರಿಯೆ ಉತ್ತೇಜಿತವಾದ ಹಾಗೆ ಆಗುತ್ತದೆ. ಜೊತೆಗೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮದ ಕಾಂತಿ ಹೊಳಪಿನಿಂದ ಕೂಡಿರುತ್ತದೆ ಜೊತೆಗೆ ತಲೆ ಕೂದಲಿನ ಬೆಳವಣಿಗೆ ಮತ್ತು ಆರೋಗ್ಯ ವೃದ್ಧಿಯಾಗಿ ಮನಸ್ಸು ಪ್ರಶಾಂತತೆಯಿಂದ ತುಂಬಿರುತ್ತದೆ.

ನವರಾತ್ರಿ ಹಬ್ಬದ ಸಮಯದಲ್ಲಿ

• ನವರಾತ್ರಿ ಹಬ್ಬದಲ್ಲಿ ನಮ್ಮ ಹಿಂದೂ ಭಕ್ತರು ಸಂಸ್ಕರಿಸಿದ ಆಹಾರವನ್ನು ತ್ಯಾಗ ಮಾಡುತ್ತಾರೆ, ಪ್ಯಾಕೇಜ್ ಅಥವಾ ಬಾಟಲ್ ನಲ್ಲಿ ಇರುವ ಆಹಾರವನ್ನು ಸೇವಿಸುವುದಿಲ್ಲ. ಜೊತೆಗೆ ರೆಫ್ರಿಜರೇಟರ್ ನಲ್ಲಿ ಅಥವಾ ಪ್ರಿಸರ್ವೇಶನ್ ನಲ್ಲಿ ಇಟ್ಟಿರುವ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ.

• ಏಕೆಂದರೆ ಇವುಗಳು ತಾಜಾ ಆಹಾರ ಆಗಿರುವುದಿಲ್ಲ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಎಣ್ಣೆಯಲ್ಲಿ ಕರಿಯದೇ ಇರುವ ನೈಸರ್ಗಿಕವಾಗಿ ಹಣ್ಣು-ತರಕಾರಿ, ಎಲೆಗಳನ್ನು ಒಳಗೊಂಡ ಮತ್ತು ನೀರಿನ ಅಂಶ ಹೆಚ್ಚಾಗಿ ಇರುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ.

ಸಾತ್ವಿಕ, ರಾಜಸಿಕ ಮತ್ತು ತಾಮಸಿಕ

• ಆಯುರ್ವೇದದ ಪ್ರಕಾರ ಮನುಷ್ಯನ ಆಹಾರ ಪದ್ಧತಿಯಲ್ಲಿ ಮೂರು ಗುಣಗಳು ಕಂಡು ಬರುತ್ತವೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಸಾತ್ವಿಕ ಆಹಾರ ಪದ್ಧತಿ ಎಂದರೆ, ಶುದ್ಧವಾದ, ನೈಸರ್ಗಿಕವಾದ, ಆರೋಗ್ಯಕ್ಕೆ ಹಿತಕರವಾದ ಮತ್ತು ಶಕ್ತಿ, ಚೈತನ್ಯವನ್ನು ನೀಡುವಂತಹ ಆಹಾರ.

• ರಾಜಸಿಕ ಮತ್ತು ತಾಮಸಿಕ ಎಂದರೆ, ಹಣ್ಣಾಗದ, ಅಷ್ಟೇನೂ ಆರೋಗ್ಯಕ್ಕೆ ಹಿತಕರವಲ್ಲದ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರ. ಆಯುರ್ವೇದ ತಜ್ಞರ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಈ ಗುಂಪಿಗೆ ಸೇರುತ್ತವೆ. ಹೀಗಾಗಿ ನವರಾತ್ರಿ ಹಬ್ಬದಲ್ಲಿ ಇವುಗಳನ್ನು ಸೇವನೆ ಮಾಡುವುದು ನಿಷಿದ್ಧ ಎಂದು ಹೇಳುತ್ತಾರೆ.

ಹಿಂದೂ ಭಕ್ತರ ನಂಬಿಕೆಯ ಪ್ರಕಾರ

ಹಿಂದೂ ಭಕ್ತರು ಅವರ ನಂಬಿಕೆಯ ಪ್ರಕಾರ ಈರುಳ್ಳಿ ಬೆಳ್ಳುಳ್ಳಿ ತಿನ್ನುವುದನ್ನು ಈ ಸಂದರ್ಭದಲ್ಲಿ ಬಿಟ್ಟು ಬಿಡುತ್ತಾರೆ. ಆದರೆ ಬೆಳ್ಳುಳ್ಳಿ ರಾಜಯೋಗಿನಿ ಗುಂಪಿಗೆ ಸೇರಿದ ಆಹಾರ ಪದಾರ್ಥವಾಗಿದೆ. ಅಂದರೆ ಬೆಳ್ಳುಳ್ಳಿ ತಿನ್ನುವುದರಿಂದ ಅವರ ಮನಸ್ಸಿನ ಕಾಮನೆಗಳು ದೂರವಾಗುತ್ತವೆ.

ಈರುಳ್ಳಿ ವಿಚಾರದಲ್ಲಿ ಹೇಳುವುದಾದರೆ…

• ಆದರೆ ಈರುಳ್ಳಿ ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ. ನವರಾತ್ರಿ ಹಬ್ಬದ ಸಂಪೂರ್ಣ ಒಂಬತ್ತು ದಿನಗಳ ಭಕ್ತರು ಮನಸ್ಸಿನ ಎಲ್ಲಾ ಆಸೆ ಇಷ್ಟಾರ್ಥಗಳನ್ನು ಬದಿಗಿಟ್ಟು ಕೇವಲ ದೇವಿ ಪೂಜೆಯಲ್ಲಿ ಸಾಧಾರಣ ಜೀವನದಲ್ಲಿ ತೊಡಗಿಕೊಳ್ಳಬೇಕು.

• ಆದರೆ ರಾಜಸಿಕ ಮತ್ತು ತಾಮಸಿಕ ಗುಣ ಲಕ್ಷಣಗಳನ್ನು ಒಳಗೊಂಡಿರುವ ಈರುಳ್ಳಿ ಬೆಳ್ಳುಳ್ಳಿಯನ್ನು ಹಬ್ಬದ ಸಂದರ್ಭಗಳಲ್ಲಿ ಸೇವನೆ ಮಾಡುವುದರಿಂದ ಅವರ ಹಬ್ಬದ ಆಚರಣೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ನವರಾತ್ರಿ ಆಹಾರ ಎಂದು ಬಂದಾಗ ಅಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳಿಗೆ ಜಾಗವಿಲ್ಲ.