ಮನೆ ರಾಜ್ಯ ಪ್ರಸಾದದ ರೀತಿ ಔಷಧ ನೀಡಬೇಡಿ, ಸಂರಕ್ಷಿತ ಮಾದರಿಯಲ್ಲಿ ವಿತರಿಸಿ : ಜಿಲ್ಲಾಧಿಕಾರಿ

ಪ್ರಸಾದದ ರೀತಿ ಔಷಧ ನೀಡಬೇಡಿ, ಸಂರಕ್ಷಿತ ಮಾದರಿಯಲ್ಲಿ ವಿತರಿಸಿ : ಜಿಲ್ಲಾಧಿಕಾರಿ

0

ಮದ್ದೂರು: ಜನರ ಆರೋಗ್ಯ ಕಾಪಾಡುವ ಔಷಧಿಯನ್ನು ದೇವಾಲಯಗಳಲ್ಲಿ ಪ್ರಸಾದ ವಿತರಣೆ ಮಾಡುವ ರೀತಿ ಕೈಗೆ ನೀಡದೆ ಅದನ್ನು ಸಂರಕ್ಷಣೆ ಮಾದರಿಯಲ್ಲಿ ಪ್ಯಾಕೇಜ್ ಮಾಡಿ ನೀಡಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ತಾಕೀತು ಮಾಡಿದರು.

Join Our Whatsapp Group

ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ  ಭೇಟಿ ನೀಡಿ ಪರಿಶೀಲನೆ ವೇಳೆ ಮಾತ್ರೆ,ಟಾನಿಕ್ ಇತರೆ  ಔಷಧ ಪದಾರ್ಥಗಳನ್ನು  ಕೈಗೆ ವಿತರಣೆ ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿ ಸಮರ್ಪಕವಾಗಿ ಔಷದ ವಿತರಣೆಗೆ ಸೂಚಿಸಿದರು.

ಔಷಧಿ ವಿತರಣಾ ಕೇಂದ್ರವನ್ನ ತಪಾಸಣೆ ನಡೆಸಿ ರೋಗಿಗಳಿಗೆ ಔಷಧವನ್ನು ಪ್ರಸಾದ ರೀತಿ ವಿತರಿಸಬೇಡಿ ಅವುಗಳನ್ನು ಮೆಡಿಕಲ್ ಸ್ಟೋರ್ ನಲ್ಲಿ ಕೊಡುವ ರೀತಿ ಸಂರಕ್ಷಿಸಿ, ಔಷಧಿಯನ್ನು ದಿನದ ಯಾವ ಅವಧಿಯಲ್ಲಿ ಸ್ವೀಕರಿಸಬೇಕು ಎಂಬುದನ್ನ ನಮೂದಿಸಿ ವಿತರಿಸಬೇಕು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಬಾಲಕೃಷ್ಣಗೆ ತಿಳಿಸಿದರು.

ಪಟ್ಟಣದ ಆಸ್ಪತ್ರೆಯಲ್ಲಿನ ಹೊರರೋಗಿ  ಮತ್ತು ಒಳರೋಗಿಗಳ ದಾಖಲಾತಿ

ವಾರ್ಡ್ ಪರಿಶೀಲಿಸಿ ಒಳರೋಗಿಗಳಿಂದ ಆಸ್ಪತ್ರೆಯಲ್ಲಿ ದೊರಕುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಎಲ್ಲರಿಗೂ ಸಮರ್ಪಕ ರೀತಿಯಲ್ಲಿ ಆಹಾರವನ್ನು ವಿತರಣೆ ಮಾಡುತ್ತಿದ್ದು ಕಾಲಕಾಲಕ್ಕೆ ವೈದ್ಯರು ಬಂದು ತಪಾಸಣೆ ಮಾಡುತ್ತಿರುವುದಾಗಿ ರೋಗಿಗಳು  ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ  ರವೀಂದ್ರ ಗೌಡ,, ತಮ್ಮೇಗೌಡ  ಇತರರಿದ್ದರು.