ಬೆಂಗಳೂರು: ವಿಧಾನಸೌಧದಲ್ಲಿ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್ ಯುಟಿ ಖಾದರ್ ಶಾಸಕರನ್ನ ವೈರಿಗಳಂತೆ ನೋಡಬೇಡಿ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಸಭಾಧ್ಯಕ್ಷನಾಗಿ ವ್ಯವಸ್ಥೆ ಮಾಡೋದು ನನ್ನಕೆಲಸ ಶಾಸಕರನ್ನ ವೈರಿಗಳಂತೆ ನೊಡಬೇಡಿ. 4 ಲಕ್ಷ ಹಣ ಆಗಬಹುದು. ಅದಕ್ಕೆ ಅಧಿಕ ಹಣ ಬೇಕಿಲ್ಲ. ಬಿಜೆಪಿಯವರು ಚೇರ್ ವ್ಯವಸ್ಥೆಗೆ ಕೇಳಿದ್ದರು ಎಂದರು.
ಇನ್ನು ಸದ್ಯಕ್ಕೆ ನನ್ನದು ಯಾವುದೇ ಬೇಡಿಕೆ ಇಲ್ಲ. ನಾನು ಎಲ್ಲಿದ್ದರೂ ಖುಷಿಯಾಗಿಯೇ ಇರುತ್ತೇನೆ. ರಾಜಕೀಯ ಖುಷಿ ಅನಿಸದ ದಿನ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.














