ಮೈಸೂರು: ಸಾಂಸ್ಕೃತಿಕ ನಗರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸಿ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಸಮಯ ಕಳೆಯುತ್ತಾರೆ. ಆನಂದಿಸುತ್ತಾರೆ.
ಅಂತೆಯೇ ನಗರದ ಪ್ರಮುಖ ಪ್ರವಾಸಿ ಸ್ಥಳ ಹಾಗೂ ನಗರದ ಜನತೆಯೂ ವಾರಾಂತ್ಯದಲ್ಲಿ ಹೆಚ್ಚಾಗಿ ಭೇಟಿ ನೀಡುವ ಜಾಗ ವಸ್ತು ಪ್ರದರ್ಶನ. ಆದರೆ ವಸ್ತುಪ್ರದರ್ಶನ ನೋಡಲು ಆಗಮಿಸುವ ಪ್ರವಾಸಿಗರ ವಾಹನ ಪಾರ್ಕಿಂಗ್’ಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವಾಹನ ಸವಾರರಿಂದ ನಿಗದಿತ ಶುಲ್ಕಕ್ಕೂ ಹೆಚ್ಚು ಪ್ರಮಾಣದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಹಗಲು ದರೋಡೆ ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಪಾರ್ಕಿಂಗ್ ಶುಲ್ಕದ ವಿವರ
ಸ್ಕೂಟರ್ ಹಾಗೂ ಆಟೋ ಗೆ 10 ರೂ,ಕಾರ್ ಗೆ 20 ರೂ, ಮೆಟಾಡರ್ ವ್ಯಾನ್ ಗೆ 30 ರೂ ಬಸ್ ಗೆ 50 ರೂ ನಿಗದಿ ಮಾಡಲಾಗಿದೆ. ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಿದ್ದಲ್ಲಿ ಪ್ರತಿ ದೂರಿಗೆ 500 ರೂ ನಂತೆ ದಂಡ ವಿಧಿಸಲಾಗುವುದೆಂದು ಗುತ್ತಿಗೆದಾರರಿಗೆ ಷರತ್ತು ಹಾಕಲಾಗಿದೆ. ಮಾತ್ರವಲ್ಲದೇ ನಿಗದಿತ ಶುಲ್ಕಗಳ ನಾಮಫಲಕ ಮೂಲಕ ಮಾಹಿತಿ ನೀಡುವಂತೆ ಟೆಂಡರ್ ನೀಡುವ ವೇಳೆ ಸೂಚನೆ ನೀಡಲಾಗಿದೆ.
ಹೀಗಿದ್ದರೂ ಸ್ಕೂಟರ್ ಗೆ 20 ರೂ, ಕಾರ್ ಗೆ 50 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಕೆಲವು ಸಂಘಟಕರು ದೂರು ನೀಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಅಧಿಕಾರಿಗಳ ಈ ಬೇಜವಬ್ದಾರಿ ವರ್ತನೆ ಪ್ರವಾಸಿಗರು, ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.