ಮನೆ ತಂತ್ರಜ್ಞಾನ ನೀವಿರುವ ಸ್ಥಳದಲ್ಲಿ ಹವಾಮಾನ ಮಾಹಿತಿ ತಿಳಿಯಲು ಅಪ್ಲಿಕೇಶನ್‌ ಡೌನ್ ಲೋಡ್ ಮಾಡಿ

ನೀವಿರುವ ಸ್ಥಳದಲ್ಲಿ ಹವಾಮಾನ ಮಾಹಿತಿ ತಿಳಿಯಲು ಅಪ್ಲಿಕೇಶನ್‌ ಡೌನ್ ಲೋಡ್ ಮಾಡಿ

0

ದೇಶದ ಹಲವೆಡೆ ಇತ್ತೀಚೆಗೆ ಭಾರೀ ಮಳೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

Join Our Whatsapp Group

ಆದರೆ ನೀವು ಉಳಿದುಕೊಂಡಿರುವ ಸ್ಥಳದಲ್ಲಿ ಇಂದು ಮಳೆ ಬೀಳುತ್ತದೆಯೇ? ಅಥವಾ ನಾಳೆ ಹವಾಮಾನ ಹೇಗಿರಲಿದೆ ಎಂಬುದರ ಮಾಹಿತಿಯನ್ನು ಈಗ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ತಿಳಿದುಕೊಳ್ಳಬಹುದು. ಮೊಬೈಲ್​ ಮೂಲಕ ಸುಲಭದಲ್ಲಿ ಮಳೆ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಅದು ಹೇಗೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್ ತಯಾರಿಕಾ ಕಂಪನಿಗಳು ತಮ್ಮದೇ ಆದ ಹವಾಮಾನ ಅಪ್ಲಿಕೇಶನ್‌ ಗಳನ್ನು ಒದಗಿಸುತ್ತವೆ. ಆದರೆ ಈ ಹವಾಮಾನ ಅಪ್ಲಿಕೇಶನ್‌ ಗಳು ಎಚ್ಚರಿಕೆ ವೈಶಿಷ್ಟ್ಯವನ್ನು ಹೊಂದಿಲ್ಲದಿರಬಹುದು. ಆದ್ರೆ Google Playstore ನಲ್ಲಿ ಹವಾಮಾನ ಅಪ್ಲಿಕೇಶನ್ ಅನ್ನು ಡೌನ್‌ ಲೋಡ್ ಮಾಡುವ ಮೂಲಕ ನೀವು ಮಳೆ ಬಗೆಗಿನ ಎಚ್ಚರಿಕೆಗಳನ್ನು ಪಡೆಯಬಹುದು.

ಮೊದಲಿಗೆ ನಿಮ್ಮ Android ಫೋನ್‌ ನಲ್ಲಿ ಹವಾಮಾನ ಅಪ್ಲಿಕೇಶನ್ ಓಪನ್ ಮಾಡಿ. ನಂತರ ಸೆಟ್ಟಿಂಗ್‌ ಗಳಲ್ಲಿ ನಾಟಿಫಿಕೇಶನ್ ​ಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ತುರ್ತು ಎಚ್ಚರಿಕೆಗಳು, ಹವಾಮಾನ ಎಚ್ಚರಿಕೆಗಳ ಆಯ್ಕೆಗಳನ್ನು ಆನ್ ಮಾಡಬಹುದು.

Apple iPhone ಅಂತರ್ನಿರ್ಮಿತ ಹವಾಮಾನ ಅಪ್ಲಿಕೇಶನ್ ಅನ್ನು ಹೊಂದಿದೆ. ಬಿರುಗಾಳಿಗಳು ಮತ್ತು ಪ್ರವಾಹಗಳಂತಹ ತೀವ್ರ ಹವಾಮಾನ ಪರಿಸ್ಥಿತಿಗಳ ಕುರಿತು ನೀವು ಈ ಅಪ್ಲಿಕೇಶನ್​ ಮೂಲಕ ನಾಟಿಫಿಕೇಶನ್ ​ಗಳನ್ನು ಪಡೆಯಬಹುದು. ಈ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸುವುದರಿಂದ ಹವಾಮಾನ ಸರಿಯಾಗಿಲ್ಲದಿದ್ದಾಗ ನಿಮಗೆ ತ್ವರಿತ ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ತೀವ್ರ ಹವಾಮಾನ ಪರಿಸ್ಥಿತಿಗಳ ಕುರಿತು ನಿಮ್ಮ iPhone ನಲ್ಲಿ ಅಧಿಸೂಚನೆಗಳನ್ನು ಪಡೆಯಲು  ಕೆಲವು ಸೆಟ್ಟಿಂಗ್‌ ಗಳನ್ನು ಬದಲಾಯಿಸಿ.

ಮೊದಲು ನಿಮ್ಮ iPhone ನಲ್ಲಿ ಹವಾಮಾನ ಅಪ್ಲಿಕೇಶನ್ ಓಪನ್ ಮಾಡಿ. ಕೆಳಗಿನ ಬಲ ಮೂಲೆಯಲ್ಲಿರುವ ಲೀಸ್ಟ್​ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಹೆಚ್ಚುವರಿ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ. ಅದರ ನಂತರ ನಾಟಿಫಿಕೇಶನ್​ಗಳ ಮೇಲೆ ಕ್ಲಿಕ್ ಮಾಡಿ, ಅಲ್ಲಿ ತೀವ್ರ ಹವಾಮಾನ ಆಯ್ಕೆಯನ್ನು ಆನ್ ಮಾಡಿ.

ಈ ಸೆಟ್ಟಿಂಗ್‌ಗಳೊಂದಿಗೆ ನೀವು ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಿದ್ದಾಗ ಸೂಚನೆಯನ್ನು ಪಡೆಯಬಹುದು. ಈ ಅಧಿಸೂಚನೆಗಳಿಗಾಗಿ ವೈಬ್ರೇಶನ್ ಮತ್ತು ಎಚ್ಚರಿಕೆಯ ರಿಂಗ್​ಟೋನ್ ಅನ್ನು ಸಹ ಸೆಟ್​ ಮಾಡಬಹುದು. ಇನ್ನು ಐಫೋನ್​ನಲ್ಲಿರುವ ಹವಾಮಾನ ಅಪ್ಲಿಕೇಶನ್​ ಮುಂದಿನ ಗಂಟೆ ಅಥವಾ ದಿನಗಳಲ್ಲಿ ಮಳೆ ಹೇಗಿರುತ್ತದೆ ಎಂದು ಬಳಕೆದಾರರಿಗೆ ತ್ವರಿತವಾಗಿ ತಿಳಿಸುತ್ತದೆ.

ನೀವು Google ಮ್ಯಾಪ್​ಗಳನ್ನು ಬಳಸುತ್ತಿದ್ದರೆ, ಇದು  ಸಹ ಹವಾಮಾನ ಸಂಬಂಧಿತ ಎಚ್ಚರಿಕೆಗಳನ್ನು ನೀಡುತ್ತದೆ. ಈ ಎಚ್ಚರಿಕೆಗಳನ್ನು ಆನ್ ಮಾಡುವುದರಿಂದ ಹವಾಮಾನದಿಂದ ನಿಮ್ಮ ಪ್ರದೇಶ ಕೆಡುವ ಮೊದಲು ನಿಮ್ಮನ್ನು ಎಚ್ಚರಿಸುತ್ತದೆ. ಭೂಕಂಪ, ಪ್ರವಾಹ, ಟೈಫೂನ್ ಇತ್ಯಾದಿ ಎಚ್ಚರಿಕೆಗಳು ನಿಮ್ಮ ಫೋನ್‌ ನಲ್ಲಿ ಬರುತ್ತವೆ. ಈ ಎಚ್ಚರಿಕೆಗಳೊಂದಿಗೆ ನೀವು ಮೊದಲೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.