ಮನೆ ಸುದ್ದಿ ಜಾಲ ಕರ್ನಾಟಕ ವಚನಸಾಹಿತ್ಯವನ್ನು ಇಡೀ ಜಗತ್ತಿಗೆ ಪಸರಿಸಿದವರು ಡಾ: ಫ. ಗು ಹಳಕಟ್ಟಿ : ಡಾ. ಬಿ....

ಕರ್ನಾಟಕ ವಚನಸಾಹಿತ್ಯವನ್ನು ಇಡೀ ಜಗತ್ತಿಗೆ ಪಸರಿಸಿದವರು ಡಾ: ಫ. ಗು ಹಳಕಟ್ಟಿ : ಡಾ. ಬಿ. ವಿ ನಂದೀಶ್

0

ಮಂಡ್ಯ: ಡಾ. ಫ. ಗು ಹಳಕಟ್ಟಿ ಅವರು ತಮ್ಮ ಭಾಷಾಂತರದ ಮೂಲಕ ಕರ್ನಾಟಕದ ವಚನಸಾಹಿತ್ಯವನ್ನು ಇಡೀ ಜಗತ್ತಿಗೆ ಪಸರಿಸಿದ ಮಹಾನ್ ಬರಹಗಾರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕರಾದ ಡಾ. ಬಿ. ವಿ ನಂದೀಶ್ ಅವರು ಬಣ್ಣಿಸಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ: ಫ. ಗು ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ; ಫ. ಗು ಹಳಕಟ್ಟಿ ಅವರ 145 ನೇ ಜನ್ಮ ದಿನಚಾರಣೆಯನ್ನು ಆಚಾರಿಸುತ್ತಿದ್ದು, ಕನ್ನಡದ ವಚನ, ಸಾಹಿತ್ಯ ಹಾಗೂ ಭಾಷಾಂತರಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರವಾದದ್ದು ಎಂದು ಹೇಳಿದರು.

ಡಾ: ಫ. ಗು ಹಳಕಟ್ಟಿ ಅವರ ಜೀವನ ಸಂದೇಶ, ತತ್ವ ಹಾಗೂ ಆದರ್ಶಗಳ ಬಗ್ಗೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯ ವಿವಿಧ ಶಾಲಾ – ಕಾಲೇಜುಗಳಲ್ಲಿ ಫ. ಗು ಹಳಕಟ್ಟಿ ಅವರ ಜಯಂತಿ ಆಚರಣೆಗೆ ಕರೆ ನೀಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಸಮುದಾಯ ಮುಖಂಡರುಗಳಾದ ರಾಜಣ್ಣ ಎಂ.ಎಸ್, ದೇವರಾಜು, ಆನಂದ್, ಸುಧಾ, ಚೇತನ್ ಹಾಗೂ ರಾಜಕುಮಾರ್ ಉಪಸ್ಥಿತರಿದ್ದರು.