ಮನೆ ರಾಜ್ಯ ಡಾ. ಜಿ. ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ? ತುಮಕೂರಿನಲ್ಲಿ ಅಚ್ಚರಿ ಭವಿಷ್ಯ ನುಡಿದ ಗೊರವಯ್ಯ!

ಡಾ. ಜಿ. ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ? ತುಮಕೂರಿನಲ್ಲಿ ಅಚ್ಚರಿ ಭವಿಷ್ಯ ನುಡಿದ ಗೊರವಯ್ಯ!

0

ತುಮಕೂರು : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಡಾ.ಜಿ ಪರಮೇಶ್ವರ್ ಹೆಸರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹರಿದಾಡಲು ಆರಂಭವಾಗಿದೆ. ಈ ಸಲ ಕಾರಣವಾದದ್ದು, ತುಮಕೂರಿನಲ್ಲಿ ನಡೆದ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಒಬ್ಬ ಗೊರವಯ್ಯ ಭವಿಷ್ಯ ನುಡಿದ ಘಟನೆ. ಭವಿಷ್ಯಕಾರರು ಪರಮೇಶ್ವರರಿಗೆ “ನೀವು ಮುಂದಿನ ಮುಖ್ಯಮಂತ್ರಿ ಆಗುವ ಯೋಗವಿದೆ” ಎಂಬ ಘೋಷಣೆಯನ್ನು ಮಾಡಿದ್ದು, ಇದನ್ನು ಸಾಕ್ಷಾತ್ ಮಂಟಪದ ಮುಂದೆಯೇ ಹೇಳಿದರು.

ಈ ಸಂದರ್ಭದಲ್ಲಿ ಪರಮೇಶ್ವರ್ ಸ್ಪಂದನೆ ನೀಡದೇ ನಗುತ್ತಲೇ ಮುಂದಿನ ಕಾರ್ಯಕ್ರಮದತ್ತ ಸಾಗಿದರು. ಪರಮೇಶ್ವರ್ ಅವರು ದಕ್ಷಿಣ ಭಾರತದಲ್ಲಿ ಒಬ್ಬ ಹಿರಿಯ ದಲಿತ ನಾಯಕರಾಗಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ತನು, ಮನ, ಧನವನ್ನು ಅರ್ಪಿಸಿ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಹಲವು ಬಾರಿ ಸಚಿವರಾಗಿದ್ದ ಅವರು, ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನೂ ನಿರ್ವಹಿಸಿದ್ದವರು.