ಮನೆ ಮನೆ ಮದ್ದು ಎಳೆನಾಗರು ಡಿಫ್ತೀರಿಯಾ

ಎಳೆನಾಗರು ಡಿಫ್ತೀರಿಯಾ

0

ಸೂಕ್ಷ್ಮ ವಿಷಕ್ರಿಮಿಗಳು ಕಿರುನಾಲಿಗೆಯನ್ನು ಆವರಿಸಿ ದಪ್ಪನಾಗುತ್ತಾ ಒಂದು ಉಸಿರು ಕಟ್ಟಿ ಸಾಯುತ್ತಾನೆ. ಈ ರೋಗವನ್ನು ಎಳೆನಾಗರು ಎನ್ನುತ್ತಾರೆ. ಪೆಟ್ಲುಪ್ಪನ್ನು ಅರಳು ಮಾಡಿ ಪುಡಿಯನ್ನು ಅಂಗಳಿನಲ್ಲಿ ಮೂರು ಸಾರಿ ಇಡುತ್ತಾ ಬಂದರೆ ಆ ಹುಳುಗಳು ಸತ್ತು ಊಟ ನಿವಾರಣೆಯಾಗುತ್ತದೆ ಇದೊಂದು ಮಾರಕ ರೋಗ.

Join Our Whatsapp Group

ಎದೆ ನೋವು :-

ಸಾಮಾನ್ಯವಾಗಿ ನೆಗಡಿಯಾಗಿ, ಕೆಮ್ಮು ಉಂಟಾಗಿ ಅತಿಯಾದ ಕೆಮ್ಮುತ್ತಿರುವಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಹೃದಯದ ಎಡ ಬಲ ಭಾಗಗಳಲ್ಲಿ ರಕ್ತ ಸಂಚಾರ ಆಗದೆ ಎದೆ ನೋವು ಆಗುತ್ತದೆ. ಶ್ವಾಸಕೋಶದಲ್ಲಿ ಆಮ್ಲಜನಕ ಕಡಿಮೆಯಾದಾಗ ಎದೆ ನೋವು ಬರುತ್ತದೆ

1. ಎದೆ ನೋವು ಶಮನವಾಗಲು ದಾಳಿಂಬೆ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಕೆಮ್ಮಿನಿಂದ ಉಂಟಾದ ನೋವು ಅಡಗುತ್ತದೆ.

2. ಗ್ಲಿಸರಾಲ್  ನೈಟ್ರೇಟ್, ಸಾರ್ ಬಿಟಾಲ್ ಎಂಬ ಮಾತ್ರೆ ಚೀಪುತ್ತಿದ್ದರೆ ಹೃದಯದ ತೊಂದರೆಯಿಂದ ಉಂಟಾದ  ಎದೆನೋವು ನಿವಾರಣೆ ಆಗುವುದು.

3. ಎಳನೀರನ್ನು ಕೊತತ್ತಂಬರಿ ಸೊಪ್ಪನ್ನು ಅರೆದು, ಏಲಕ್ಕಿ, ಸಕ್ಕರೆ ಬೆರೆಸಿ ಕುಡಿಯುತ್ತಿದ್ದರೆ ನೋವು ಪರಿಹಾರವಾಗುವುದು.

4. ಮಜ್ಜಿಗೆಯಲ್ಲಿ ಸೈಂಧವ ಲವಣ ಸೇರಿಸಿ ಕುಡಿದರೆ ಎದೆ ನೋವು ನಿವಾರಣೆ ಆಗುವುದು.

5. ಮಜ್ಜಿಗೆಯಲ್ಲಿ ಎಳೆ ಸೀಬೇಕಾಯಿಯ ಕಷಾಯವನ್ನು ಸಿದ್ಧಪಡಿಸಿ ಆರಿಸಿ ಕುಡಿದರೆ ಎದೆನೋವು ನಿವಾರಣೆ ಆಗುವುದು.

6. ಒಂದು ನಿಂಬೇಹಣ್ಣುನ್ನು ಕತ್ತರಿಸಿ, ಒಂದು ಹೋಳಿನಲ್ಲಿ ಸಿಗುವ ರಸವನ್ನು ಹಿಂಡಿ ಸಕ್ಕರೆ ಬೆರೆಸಿ ಕುಡಿದರೆ ಎದೆ ನೋವು ಪರಿಹಾರವಾಗುವುದು.  

7. ಹಸಿ ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಒಂದು ಚಮಚ ಪುಡಿಗೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕಿವುಚಿ ಶೋಧಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯುವ ಶೀತ ಕಷಾಯದಿಂದ ಎದೆ ನೋವು ಪರಿಹಾರವಾಗುವುದು.