ಮನೆ ಆರೋಗ್ಯ ಲಿಂಬು ಪಾನೀಯ ಸೇವಿಸಿ ತೂಕ ಇಳಿಸಿಕೊಳ್ಳಿ

ಲಿಂಬು ಪಾನೀಯ ಸೇವಿಸಿ ತೂಕ ಇಳಿಸಿಕೊಳ್ಳಿ

0

ತೂಕ ನಷ್ಟಕ್ಕೆ ಕೆಲವೊಂದು ಸಿಂಪಲ್‌ ಅಭ್ಯಾಸ ಕೂಡ ಬಹುದೊಡ್ಡ ಪರಿಣಾಮ ನೀಡುತ್ತದೆ. ಅಂತಹ ಸುಲಭ ಅಭ್ಯಾಸಗಳಲ್ಲಿ ಲಿಂಬು ಮತ್ತು ನೀರನ್ನು ಬೆರೆಸಿ ಸೇವನೆ ಮಾಡುವುದು ಒಂದಾಗಿದೆ. ಲಿಂಬು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಲ್ಲದೆ ಅದರಲ್ಲಿನ ವಿಟಮಿನ್‌ ಸಿ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡುತ್ತದೆ.

​ಲಿಂಬು ನೀರಿನ ಸೇವನೆ

ತೂಕ ನಷ್ಟಕ್ಕೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಅದರಲ್ಲೂ ಲಿಂಬು ರುಚಿಯನ್ನು ಹೆಚ್ಚಿಸುವುದಲ್ಲದೆ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಲಿಂಬುವಿನಲ್ಲಿ ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ -6, ಪೆಕ್ಟಿನ್ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ರಕ್ಷಿಸುವುದಲ್ಲದೆ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಇತರ ರೀತಿಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

​ತೂಕ ಇಳಿಕೆಗೆ ಹೇಗೆ ಸಹಕಾರಿ

ನಿಂಬೆ ಪಾನಕದಲ್ಲಿ ಅನೇಕ ಪೋಷಕಾಂಶಗಳಿವೆ. ಆದರೆ ಇದು ಹಸಿವನ್ನು ನಿಯಂತ್ರಿಸಲು ಮತ್ತು ಜಂಕ್ ಫುಡ್ ತಿನ್ನುವ ಬಯಕೆಯನ್ನು ಕಡಿಮೆ ಮಾಡುವ ಪೆಕ್ಟಿನ್ ಅನ್ನು ಹೊಂದಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯವನ್ನು ಉತ್ತೇಜಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪ್ರತಿದಿನ ಲಿಂಬೆ ರಸದ ನೀರನ್ನು ಕುಡಿಯುವುದು ದೇಹದ ಉರಿಯೂತ ಮತ್ತು ನೀರಿನ ಧಾರಣವನ್ನು ಕಡಿಮೆ ಮಾಡುವ ಮೂಲಕ ವಿಷವನ್ನು ಹೊರಹಾಕಲಿದೆ. ಲಿಂಬುವಿನಲ್ಲಿ ಪೊಟ್ಯಾಸಿಯಮ್ ಇದೆ, ಇದು ತೂಕವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಒಳ್ಳೆಯದು.

​ಲಿಂಬುವಿನ ಇತರ ಉಪಯೋಗಗಳು

ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕಿಡ್ನಿ ಸ್ಟೋನ್‌ ನ್ನು ನಿವಾರಣೆ ಮಾಡುತ್ತದೆ. ದೇಹವನ್ನು ನಿರ್ಜಲೀಕರಣವಾಗದಂತೆ ತಡೆದು, ತಂಪಾಗಿರಿಸುತ್ತದೆ. ಅನಿಮಿಯಾಕ್ಕೆ ರಾಮಬಾಣ. ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.