ಮನೆ ರಾಜ್ಯ ನಾಗರಹೊಳೆ ಉದ್ಯಾನವನದಲ್ಲಿ ಗಜ ಗಣತಿಗೆ ಚಾಲನೆ: 300 ಸಿಬ್ಬಂದಿಗಳು ಭಾಗಿ

ನಾಗರಹೊಳೆ ಉದ್ಯಾನವನದಲ್ಲಿ ಗಜ ಗಣತಿಗೆ ಚಾಲನೆ: 300 ಸಿಬ್ಬಂದಿಗಳು ಭಾಗಿ

0

ಹುಣಸೂರು: ನಾಗರಹೊಳೆ ಉದ್ಯಾನವನದ ಎಂಟು ವನ್ಯಜೀವಿ ವಲಯಗಳಲ್ಲಿ ಮೊದಲ ದಿನ 91 ಗಸ್ತುಗಳಲ್ಲಿ ನಡೆದ ಆನೆ ಗಣತಿಯ ಬ್ಲಾಕ್ ಸ್ಯಾಂಪ್ಲಿಂಗ್ ಕಾರ್ಯದಲ್ಲಿ ಗಣತಿದಾರರು(ಸಿಬ್ಬಂದಿಗಳು) ಕಂಡ ಆನೆಗಳನ್ನು ದಾಖಲಿಸಿದರು.

Join Our Whatsapp Group

ಉದ್ಯಾನದಲ್ಲಿ ಪ್ರತಿ ಗಸ್ತಿನಲ್ಲೂ ಮೂವರು ಸಿಬ್ಬಂದಿ ಒಳಗೊಂಡ ತಂಡವು ಐದು ಚ.ಕಿ.ಮೀ. ವ್ಯಾಪ್ತಿಯ ಮಾದರಿ ಬ್ಲಾಕ್‌ಗಳನ್ನು ರಚಿಸಿಕೊಂಡು, ಆಯಾ ವಲಯಗಳ ಆರ್.ಎಫ್.ಒ ಹಾಗೂ ಡಿಆರ್‌ಎಫ್‌ಒಗಳ ಮಾರ್ಗದರ್ಶನದಲ್ಲಿ ನಡೆದ ಆನೆಗಣತಿಯಲ್ಲಿ ತರಬೇತಿ ಪಡೆದ 300ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸುಮಾರು 15 ಕಿಮೀ ಕಾಲ್ನಡಿಗೆಯಲ್ಲಿ ತೆರಳಿ ನೇರ ವೀಕ್ಷಣೆಯಲ್ಲಿ ಕಾಣಿಸಿಕೊಂಡ ಗಂಡಾನೆ, ಹೆಣ್ಣಾನೆ, ಮಕನಾ ಆನೆಗಳ ಸಂಖ್ಯೆ ಹಾಗೂ ವಯಸ್ಕ, ಉಪವಯಸ್ಕ, ತಾರುಣ್ಯ ಮರಿಗಳ ವಯಸ್ಸನ್ನು ದಾಖಲಿಸಿದ್ದಾರೆಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದರು.