ಮನೆ ಅಪರಾಧ ಅಪಘಾತದಲ್ಲಿ ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ

ಅಪಘಾತದಲ್ಲಿ ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ

0

ಉತ್ತರ ಪ್ರದೇಶ: ಅಪಘಾತವೊಂದರಲ್ಲಿ ಟ್ರಕ್ ನ ಅಡಿಯಲ್ಲಿ ದ್ವಿಚಕ್ರ ವಾಹನ ಮತ್ತು ಇಬ್ಬರು ಸವಾರರು ಸಿಲುಕಿದ್ದರೂ ಅದನ್ನು ಲೆಕ್ಕಿಸದೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಹೆದ್ದಾರಿಯಲ್ಲಿ ಎಳೆದೊಯ್ದ ಘಟನೆ ಉತ್ತರಪ್ರದೇಶದ ಆಗ್ರಾ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.

Join Our Whatsapp Group

ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕಾಶ್ ನಗರದ ನಿವಾಸಿಯಾಗಿರುವ ಝಾಕಿರ್ ಹಾಗೂ ಆತನ ಗೆಳೆಯ ತನ್ನ ಬೈಕ್ ನಲ್ಲಿ ಕೆಲಸ ಮುಗಿಸಿ ರಾತ್ರಿ ಬೈಕ್ ನಲ್ಲಿ ರಾಮ್‌ಬಾಗ್‌ ನಲ್ಲಿರುವ ತಮ್ಮ ಮನೆಗೆ ಬರುತ್ತಿದ್ದ ವೇಳೆ ಮುಖ್ಯ ರಸ್ತೆಯ ವಿಭಾಜಕದಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದಾರೆ ಈ ವೇಳೆ ಎದುರು ಭಾಗದಲ್ಲಿ ಬರುತ್ತಿದ್ದ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಇಬ್ಬರು ಟ್ರಕ್ ನ ಅಡಿಭಾಗದಲ್ಲಿ ಸಿಲುಕಿದ್ದಾರೆ ಇದು ಗೊತ್ತಿದ್ದರೂ ಟ್ರಕ್ ಚಾಲಕ ವಾಹನ ನಿಲ್ಲಿಸದೆ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ ಈ ವೇಳೆ ವಾಹನದ ಎದುರು ಸಿಲುಕಿದ್ದ ಝಾಕಿರ್ ಸಹಾಯಕ್ಕಾಗಿ ಬೊಬ್ಬೆ ಹೊಡೆದರೂ ಲೆಕ್ಕಿಸಲಿಲ್ಲ ಬಳಿಕ ಹೈವೇ ಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಲಾರಿಯನ್ನು ನಿಲ್ಲಿಸಲು ಹೇಳಿದರೂ ಲೆಕ್ಕಿಸಲಿಲ್ಲ ಬಳಿಕ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಸಂಚರಿಸಿದ ಬಳಿಕ ಸಿಗ್ನಲ್ ಸಿಕ್ಕಿದೆ ಈ ವೇಳೆ ಲಾರಿ ಚಾಲಕ ನಿಲ್ಲಿಸಿದ್ದಾನೆ ಕೂಡಲೇ ಲಾರಿಯನ್ನು ಹಿಂಬಾಲಿಸುತ್ತಿದ್ದ ಇತರ ವಾಹನ ಸವಾರರು ಲಾರಿಯಡಿ ಸಿಲುಕಿದ್ದ ಬೈಕ್ ಸವಾರರನ್ನು ರಕ್ಷಣೆ ಮಾಡಿದ್ದಾರೆ ಅಲ್ಲದೆ ನಿರ್ಲಕ್ಷ ವಹಿಸಿದ್ದ ಲಾರಿ ಚಾಲಕನಿಗೆ ಮನಸ್ಸೋ ಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೈಕ್ ಸವಾರರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.