ಮಣಿಪಾಲ: ಈಶ್ವರ ನಗರದಲ್ಲಿರುವ ನಗರಸಭೆಯ ಕುಡಿಯುವ ನೀರಿನ ಪಂಪ್ ಹೌಸ್ ಗೆ ಏಕಾಏಕಿ ಕಾರೊಂದು ನುಗ್ಗಿದ ಘಟನೆ ಶನಿವಾರ ನಡೆದಿದೆ.
ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೊರಟ ಮಾರುತಿ ಬೆಲೆನೋ ಕಾರು ಶನಿವಾರ ಬೆಳಗ್ಗೆ ಈಶ್ವರ ನಗರದಲ್ಲಿರುವ ಪಂಪ್ ಹೌಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕಾರಿನಲ್ಲಿ ಐವರು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೂರದ ಊರಿನಿಂದ ಬರುವವರೆಗೆ ಮಣಿಪಾಲದಿಂದ ಈಶ್ವರ ನಗರ ತನಕ ಕಾಂಕ್ರೀಟ್ ರಸ್ತೆ ಇದ್ದು ಸ್ವಲ್ಪ ಮಣ್ಣಿನ ರಸ್ತೆ ಗೋಚರಿಸುತ್ತದೆ ಚಾಲಕರಿಗೆ ದಿಕ್ಕು ತಪ್ಪಿಸುವ ಪಾಯಿಂಟ್ ಇದಾಗಿದ್ದು. ನಗರಸಭೆ ಪಂಪ್ ಹೌಸಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಗೋಡೆ ನಿರ್ಮಿಸಿಲ್ಲ. ಪದೇ ಪದೇ ಈ ಜಾಗದಲ್ಲಿ ವಾಹನ ಚಾಲಕರು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಸುರಕ್ಷಾ ಕ್ರಮ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.