ಶ್ರೀರಂಗಪಟ್ಟಣ(Srirangapattana): ನಾಡಹಬ್ಬ ಶ್ರೀರಂಗಪಟ್ಟಣ 2022 ರ ದಸರಾ ಮಹೋತ್ಸವಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ರೇಷ್ಮೆ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ, ಶಾಸಕರುಗಳಾದ ರವೀಂದ್ರ ಶ್ರೀಕಂಠಯ್ಯ,ಕೆ.ಎಸ್.ಪುಟ್ಟರಾಜು, ಡಾ.ಭಾನುಪ್ರಕಾಶ್ ಸ್ವಾಮೀಜಿ,ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ,ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರೆನ್,ಉಪವಿಭಾಗಾಧಿಕಾರಿಗಳಾದ ಬಿ.ಸಿ ಶಿವಂದಾಮೂರ್ತಿ,ಆರ್.ಐಶ್ವರ್ಯ,ತಹಶೀಲ್ದಾರ್ ಗಳಾದ ಶ್ವೇತಾ ಎನ್.ರವೀಂದ್ರ, ಎಂ.ವಿ.ರೂಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.














