ಮನೆ ಅಪರಾಧ ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

0

ಬಳ್ಳಾರಿ: ಚಾಲನಾ ಪರವಾನಿಗೆ ತಮ್ಮ ಕೈಗೆ ನೀಡದೆ ನೇರ ಗ್ರಾಹಕರಿಗೆ ನೀಡುತ್ತಿರುವ ಕಾರಣಕ್ಕೆ ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಡ್ರೈವಿಂಗ್ ಸ್ಕೂಲ್ ಮಾಲೀಕರು ಹಲ್ಲೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

Join Our Whatsapp Group

ಡ್ರೈವಿಂಗ್ ಸ್ಕೂಲ್ ಲಾಭಿ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದ್ದು, FDA ನಾಗೇಶ ಗೌಡ ಎಂಬವರ ಮೇಲೆ ಏಳು ಜನರು ಕಚೇರಿಯಲ್ಲಿಯೇ ಹಲ್ಲೆ ನಡೆಸಿದ್ದಾರೆ.

ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಕೆ. ಮೋಹನ್, ಅರುಣ್, ತಿಪ್ಪೇಸ್ವಾಮಿ ಅಜೀಜ್ ರೆಹಮತ್, ಅಮೀರ್ ರೆಹಮಾನ್ ಮನ್ಸೂರ್ ಮತ್ತು ಜಿಲಾನ್ ಗುಂಪಿನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೌಲಬಜಾರ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಕುರಿತು ಪ್ರಕರಣ ದಾಖಲಾಗಿದೆ.

ನಿಯಮಗಳ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಗ್ರಾಹಕರ ಮನೆಗೆ ಕಳುಹಿಸಬೇಕು. ಆದರೆ ಗ್ರಾಹಕರ ಕೈಗೆ ಲೈಸನ್ಸ್ ನೀಡಿದರೆ, ಡ್ರೈವಿಂಗ್ ಸ್ಕೂಲ್ ನವರಿಗೆ ಅದಾಯವಿರುವಿದಿಲ್ಲ. ಹೀಗಾಗಿ ಲೈಸೆನ್ಸ್ ತಮಗೆ ನೀಡುವಂತೆ ಡ್ರೈವಿಂಗ್ ಸ್ಕೂಲ್ ನವರು ವಾಗ್ವಾದ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕಚೇರಿಯ ಎಲ್ಲಾ ಸಿಬ್ಬಂದಿ ಮುಂದೆಯೇ ಹಲ್ಲೆ ಮಾಡಲಾಗಿದೆ. ಹಲ್ಲೆ ಮತ್ತು ಗಲಾಟೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.