ಮೂಲದ್ವಿಷಮಘಾಚರಧ್ರುವಮೃದುಕ್ಷಿಪೈರ್ವಿನಾರ್ಕಂ ಶನಿಂ
ಪಾಪೈರ್ಹಿನ ಬಲೈರ್ವಿಧೌ ಜಲಲವೇ ಶುಕೇ ವಿಧೌ ಮಾಂಸಲೇ |
ಲಗ್ನೇ ದೇವಗುರೈ ಹಲಪ್ರವಹಣಂ ಶಸ್ತ್ರಂ ನ ಸಿಂಹೇ ಘಟೇ
ಕರ್ಕಾಜೈಣಘಟೇ ತನೌ ಕ್ಷಯಕರಂ ರಿಕ್ತಾಸು ಷಷ್ಟಯಾಂ ತಥಾ ||
ಮೂಲ,ವಿಶಾಖಾ,ಮಾಘಾ, ಚರ ಸಂಜ್ಞಕ,ಧ್ರುವಸಂಜ್ಞಕ, ಮೃದುಸಂಜ್ಞಕ, ಕ್ಷಿಪ್ರಸಂಜ್ಞಕ,ನಕ್ಷತ್ರಗಳಲ್ಲಿ ರವಿ ಮತ್ತು ಶನಿವಾರದಿಂದ ಉಳಿದ ದಿನಗಳಲ್ಲಿ ಪಾಪಗ್ರಹ ಬಲಹೀನವಾಗಿದ್ದರೆ, ಚಂದ್ರ ಜಲಚರ ರಾಶಿಯ ನವಾಂಶದಲ್ಲಿದ್ದರೆ,ಶುಕ್ರ ಮತ್ತು ಚಂದ್ರ ಬಲಿಷ್ಠರಾಗಿದ್ದರೆ,ಲಗ್ನದಲ್ಲಿ ಗುರುವಿದ್ದರೆ,ನೇಗಿಲು ಮಡಿಕೆ ಚಲಾಯಿಸುವುದು ಶುಭವಾಗುವುದು, ಸಿಂಹ, ಕುಂಭ, ಕರ್ಕ ಮೇಷ, ಮಕರ ಮತ್ತು ತುಲಾ ಲಗ್ನದಲ್ಲಿ ಹಾಗೂ ರಿಕ್ತಾ ಮತ್ತು ಷಷ್ಠಿಯಲ್ಲಿ ನೇಗಿಲು ಚಲಾಯಿಸುವುದು ಹಾನಿಕರವಾದುದು.
ಬೀಜ ಬಿತ್ತುವುದು:
ಏತೇಷು ಶ್ರುತಿವಾರುಣಾದಿತಿವಿಶಾಖೋಡೂನಿ ಭೌಮಂ ಬಿನಾ
*ಬೀಜೋತ್ಪರ್ಗದಿತಾ ಶುಭಾ ತ್ವಗುಭತೋಷ್ಟಾಗ್ನಿಂದುರಾಮೇಂದವಃ |
ರಾಮೇಂದ್ವಾಗ್ನಿಯುಗಾನ್ಯಸತ್ ಶುಭಕರಾಣ್ಯುಪ್ತೌೖ ಹಲೇರ್ಕೋಜ್ಝಿತಾದ್
ಭದ್ರಾಮಾಸ್ವನವಾಸ್ವಭಾನಿ ಮುನಿಭಿಃ ಪ್ರೋಕಾನ್ಯಸತ್ ಸಂತಿ ಚ ||
ಶ್ರಾವಣ, ಶತಾಭಿಷಾ, ಪುನರ್ವಸು, ವಿಶಾಖಾ ನಕ್ಷತ್ರಗಳನ್ನು ಮತ್ತು ಮಂಗಳವಾರವನ್ನು ಹೊರತುಪಡಿಸಿ, ಈ ಹಿಂದಿನ ಶ್ಲೋಕದಲ್ಲಿ ಹೇಳಿದ ಮುಹೂರ್ತದಲ್ಲಿ ನೇಗಿಲು ಚಲಾಯಿಸುವುದು ಬೀಜ ಬಿತ್ತುವುದು ಶುಭವಾದುದು. ರಾಹು ಯಾವ ನಕ್ಷತ್ರದಲ್ಲಿರುತ್ತಾನೋ ಆ ನಕ್ಷತ್ರದಿಂದ 8 ನಕ್ಷತ್ರ ಅಶುಭ, 3 ಶುಭ,1 ಅಶುಭ,3 ಶುಭ, 1 ಅಶುಭ, 3 ಶುಭ, 1 ಅಶುಭ, 3 ಶುಭ,4 ಅಶುಭವಾಗುತ್ತವೆ. ಮತ್ತು ಸಧ್ಯ ಯಾವ ನಕ್ಷತ್ರದಲ್ಲಿ ಸೂರ್ಯನಿರುತ್ತಾನೋ ಅದರಿಂದ ಮೊದಲ ನಕ್ಷತ್ರ ಸಹಿತ 3 ನಕ್ಷತ್ರ ಅಶುಭ 8 ಶುಭ ಮತ್ತು 1 ಅಶುಭ ಮತ್ತು ಪುನಃ 8 ಶುಭವಾಗುತ್ತವೆ.