ಮನೆ ಕಾನೂನು ಡ್ರೋನ್ ಪ್ರತಾಪ್ ಗೆ ಡಿ.26ರ ವರೆಗೆ ನ್ಯಾಯಾಂಗ ಬಂಧನ

ಡ್ರೋನ್ ಪ್ರತಾಪ್ ಗೆ ಡಿ.26ರ ವರೆಗೆ ನ್ಯಾಯಾಂಗ ಬಂಧನ

0

ತುಮಕೂರು: ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ ಡಿಸೆಂಬರ್‌ 26ರವರೆಗೂ ನ್ಯಾಯಾಂಗ ಬಂಧನ ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

Join Our Whatsapp Group

ಅನುಮತಿ ಇಲ್ಲದೇ ಸ್ಫೋಟಗೊಳಿಸಿದ್ದಕ್ಕೆ ಡ್ರೋನ್​ ಪ್ರತಾಪ್​ನನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೋಮವಾರ (ಡಿ.16) ಮಧುಗಿರಿ ತಾಲೂಕಿನ ಜೆಎಂಎಫ್ ಸಿ ಕೋರ್ಟಿಗೆ ಡ್ರೋನ್ ಪ್ರತಾಪ್ ಅವರನ್ನು ಪೊಲೀಸರು ಹಾಜರಿಪಡಿಸಿದ್ದರು.

ವಿಚಾರಣೆ ಬಳಿಕ ಡ್ರೋನ್ ಪ್ರತಾಪ್ ಅವರನ್ನು ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಡ್ರೋನ್ ಪ್ರತಾಪ್ ಕಳೆದ ಕೆಲವು ದಿನಗಳ ಹಿಂದೆ ಅನುಮತಿ ಪಡೆಯದೆ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟಿಸಿದ್ದ ಘಟನೆ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಮದುಗಿರಿ ತಾಲೂಕು ಮಿಡಿಶೇಸಿ ಠಾಣೆ ಪೋಲಿಸರು ಅರೆಸ್ಟ್ ಮಾಡಿದ್ದರು. ಬಳಿಕ ಅವರ ಇಬ್ಬರು ಸ್ನೇಹಿತರನ್ನು ಕೂಡ ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದರು.ಇದೀಗ ಡಿಸೆಂಬರ್ 26ರವರೆಗೆ ಅಂದರೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.