ಮನೆ ಅಪರಾಧ ಪ್ರಯಾಣಿಕರನ್ನು ಡ್ರಾಪ್‌ ಮಾಡಿ, ಬಳಿಕ ಅವರ ಮನೆಗೇ ನುಗ್ಗಿ ಕಳ್ಳತನ

ಪ್ರಯಾಣಿಕರನ್ನು ಡ್ರಾಪ್‌ ಮಾಡಿ, ಬಳಿಕ ಅವರ ಮನೆಗೇ ನುಗ್ಗಿ ಕಳ್ಳತನ

0

ಬೆಂಗಳೂರು: ಪ್ರಯಾಣಿಕರನ್ನು ಡ್ರಾಪ್‌ ಮಾಡಿ ಬಳಿಕ, ಅದೇ  ಪ್ರಯಾಣಿಕರ ಮನೆಗೆ ನುಗ್ಗಿ ನಗದು ಸೇರಿ ಚಿನ್ನಾ ಭರಣ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಆನೇಕಲ್‌ ತಾಲೂಕಿನ ಬ್ಯಾಟರಾಯನ ದೊಡ್ಡಿ ಗ್ರಾಮದ ಕಾರ್ತಿಕ್‌ ಕುಮಾರ್‌ ಅಲಿಯಾಸ್‌ ಟ್ಯಾಟೋ ಕಾರ್ತಿ(25) ಬಂಧಿತ.

ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 141 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತುಗಳು, 2 ಸಾವಿರ ರೂ. ನಗದು, ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ. ಆರೋಪಿ ಜ.7ರಂದು ಕಾಮಾಕ್ಷಿಪಾಳ್ಯ ವೃಷಭಾವತಿನಗರ ನಿವಾಸಿ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ದೂರುದಾರ ಪ್ರೇಮನಾಥ ಜ.7 ರಂದು ಬೆಳಗ್ಗೆ ವೈಯಕ್ತಿಕ ಕೆಲಸದ ನಿಮಿತ್ತ ನೆಲಮಂಗಲಕ್ಕೆ ತೆರಳಿದ್ದರು. ಬೆಳಗ್ಗೆ 11 ಗಂಟೆಗೆ ಪ್ರೇಮನಾಥ ಪತ್ನಿ ಮತ್ತು ಪುತ್ರ ಸಂಬಂಧಿಕರೊಬ್ಬರನ್ನು ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಿಟ್ಟುಬರುವ ಸಲುವಾಗಿ ಆಟೋ ಬುಕ್‌ ಮಾಡಿದ್ದಾರೆ. ಈ ವೇಳೆ ಆರೋಪಿ ಆಟೋ ತೆಗೆದುಕೊಂಡು ಪ್ರೇಮನಾಥ ಮನೆಗೆ ಬಳಿ ಬಂದು, ಪ್ರೇಮನಾಥ ಪತ್ನಿ, ಪುತ್ರ ಹಾಗೂ ಸಂಬಂಧಿಕನನ್ನು ಕರೆದುಕೊಂಡು ಸ್ಯಾಟಲೈಟ್‌ ಬಸ್‌ ನಿಲ್ದಾಣದತ್ತ ತೆರಳಿದ್ದಾ. ಈ ನಡುವೆ ಮನೆಗೆ ಬೀಗ ಹಾಕಿ ಕೀ ಅನ್ನು ಕಿಟಕಿಯಲ್ಲಿ ಇರಿಸಿರುವುದಾಗಿ ಪ್ರೇಮನಾಥಗೆ ಕರೆ ಮಾಡಿ ತಿಳಿಸಿದ್ದಾರೆ.

ಈ ವಿಚಾರ ತಿಳಿದುಕೊಂಡ ಆರೋಪಿ, ಪ್ರೇಮನಾಥ ಪತ್ನಿ ಮತ್ತು ಮಗನನ್ನು ನಿಲ್ದಾಣಕ್ಕೆ ಬಿಟ್ಟು ಪ್ರೇಮನಾಥ್‌ ಮನೆ ಬಳಿ ಬಂದು ಕಿಟಕಿಯಲ್ಲಿ ಇರಿಸಿದ್ದ ಕೀ ತೆಗೆದುಕೊಂಡು ಒಳಗೆ ಹೋಗಿ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.