ಮನೆ ರಾಜ್ಯ ಅಂಡಾಶಯ ಕ್ಯಾನ್ಸರ್ ಗೆ ಮೈಸೂರು ವಿವಿ ವಿಜ್ಞಾನಿಗಳಿಂದ ಔಷಧ ಸಂಶೋಧನೆ

ಅಂಡಾಶಯ ಕ್ಯಾನ್ಸರ್ ಗೆ ಮೈಸೂರು ವಿವಿ ವಿಜ್ಞಾನಿಗಳಿಂದ ಔಷಧ ಸಂಶೋಧನೆ

0

ಮೈಸೂರು(Mysuru): ಅಂಡಾಶಯ ಕ್ಯಾನರ್‌ ಗೆ ಒಲಾಪರಿಬ್‌ ನೊಂದಿಗೆ ನೀಡುವಂಥ ಎನ್ ಪಿಬಿ  ಹೆಸರಿನ ಔಷಧ ಸಂಯುಕ್ತವನ್ನು ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ನಾಲ್ಕು ವರ್ಷದ ಸಂಶೋಧನೆ ಫಲವಾಗಿ ಎನ್‌ಪಿಬಿ ಔಷಧ ಸಂಯುಕ್ತವು ಮಾನವನ ಮೇಲೆ ಬಳಕೆ ಹಂತಕ್ಕೆ ಬಂದಿದ್ದು, ಡ್ರಗ್ ಕಂಟ್ರೋಲ್ ಜನರಲ್ ಆಫ್‌ ಇಂಡಿಯಾದಿಂದ ಒಪ್ಪಿಗೆ ಪಡೆಯಬೇಕಾಗಿದೆ.

ಮೈಸೂರು ವಿ.ವಿ. ರಾಯನಶಾಸ್ತ್ರ ವಿಭಾಗದ ನೋಡಲ್ ಅಧಿಕಾರಿ, ವಿಜ್ಞಾನಿ ಡಾ.ಬಸಪ್ಪ ಮಾಹಿತಿ ನೀಡಿ, ಸಿಸ್ ಪ್ಲಾಟಿನ್ ಕಿಮೊಥೆರಪಿ ಒಳಗಾದ ಅಂಡಾಶಯ ಕ್ಯಾನ್ಸರ್‌ ರೋಗಿಗೆ ಮತ್ತೆ ಜೀವಕೋಶಗಳು ಹಾಗೇ ಉಳಿದು ಗುಣಮುಖ ಆಗದ ಉದಾಹರಣೆಗಳಿವೆ. ಗೆಡ್ಡೆ ತೆಗೆದ ಮೇಲೂ ಮತ್ತೆ ರೋಗ ಮರುಕಳಿಸುವ ಸಾಧ್ಯತೆಯಿರುತ್ತದೆ. ಅಂಥ ಸಂದರ್ಭದಲ್ಲಿ ರೋಗಿಗೆ ಒಲಾಪರಿಬ್ ನೊಂದಿಗೆ ಎನ್‌ಪಿಬಿ ಔಷಧ ಸಂಯುಕ್ತ ನೀಡಿದರೆ ಸಂಪೂರ್ಣ ಗುಣಮುಖ ಆಗುತ್ತಾರೆ. ನಮ್ಮ ಸಂಶೋಧನಾ ವರದಿಯು ನೇಚರ್ ನಿಯತಕಾಲಿಕೆಯಲ್ಲಿ ಸ್ವೀಕೃತಗೊಂಡಿದೆ. ಅಮೆರಿಕ, ಜಪಾನ್, ರಷ್ಯಾ ಸೇರಿದಂತೆ 14 ದೇಶಗಳಲ್ಲಿ ಪೇಟೆಂಟ್ ಸಹ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ರೋಗಿಯ ಕ್ಯಾನ್ಸರ್ ಗೆಡ್ಡೆಯ ಜೀವಕೋಶವನ್ನು ಇಲಿಗೆ ಪ್ರಯೋಗ ಮಾಡಿ ನಂತರ ಔಷಧ ನೀಡಿದ್ದೇವೆ. 17 ದಿನ ಇಲಿ ಬದುಕುಳಿದಿದೆ. ಅಂಡಾಶಯ ಕ್ಯಾನ್ಸ‌ರ್ ಗೆ ತನ್ನದೇ ಅದ ಔಷಧ ಸಂಯುಕ್ತ ಕಂಡುಹಿಡಿದ ಹೆಗ್ಗಳಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪಡೆದಿದೆ ಎಂದು ಹೇಳಿದರು.

ಡಾ. ಬಸಪ್ಪ ಅವರೊಂದಿಗೆ ಸಿಂಗುವಾ ವಿಶ್ವಾ ವಿದ್ಯಾನಿಲಯದ ಡಾ.ಪೀಟರ್ ಈ ಲಾಬಿ ಹಾಗೂ ಡಾ.ವಿಜಯ್ ಪಾಂಡೆ ಸಂಶೋಧನೆಗೆ ನೆರವಾಗಿದ್ದಾರೆ.