ಹೊಸದಿಲ್ಲಿ: ತೈಲ ಬೆಲೆ ಏರಿಕೆ ಬೆನ್ನಲ್ಲೇ ಪ್ಯಾರಾಸೆಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ.
ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಓಐಇಒ ನಲ್ಲಿ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ 10.7 ರಷ್ಟು ಏರಿಕೆಯಾಗುತ್ತವೆ.
ಔಷಧಗಳ(ಬೆಲೆ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಇದನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.