ಮನೆ ರಾಜಕೀಯ ಡ್ರಗ್ಸ್ ಪ್ರಕರಣ: ರಾಜ್ಯದಲ್ಲಿ 200 ಮಂದಿ ವಿದೇಶಿಗರ ಮೇಲೆ ಕ್ರಮ- ಪರಮೇಶ್ವರ್

ಡ್ರಗ್ಸ್ ಪ್ರಕರಣ: ರಾಜ್ಯದಲ್ಲಿ 200 ಮಂದಿ ವಿದೇಶಿಗರ ಮೇಲೆ ಕ್ರಮ- ಪರಮೇಶ್ವರ್

0

ತುಮಕೂರು: ಡ್ರಗ್ಸ್ ಬಳಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುಮಾರು 200 ಮಂದಿ ವಿದೇಶಿಗರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

Join Our Whatsapp Group

ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕೆಜಿ ಗಟ್ಟಲೆ ಡ್ರಗ್ಸ್ ಅನ್ನು ಈಗಾಗಲೇ ವಶಕ್ಕೆ ಪಡೆದು ಸುಟ್ಟು ಹಾಕಿದ್ದೇವೆ. ಬಹಳ ಕಡೆ ಶಿಕ್ಷೆ ಕೂಡ ಪ್ರಕಟವಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಇರಬಹುದು ಅಥವಾ ರಾಜ್ಯದ ಯಾವುದೇ ಭಾಗದಲ್ಲಿಯಾದರೂ ವ್ಹೀಲಿಂಗ್​ ಮಾಡುವ ಬಗ್ಗೆ ಪೊಲೀಸ್ ಇಲಾಖೆ ಕಠಿಣವಾಗಿ ಕ್ರಮ ತೆಗೆದುಕೊಳ್ಳಲಿದೆ. ಅಲ್ಲದೇ ರಾಜ್ಯದಲ್ಲಿ ಡ್ರಗ್ಸ್ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ ಅಂತ ಡಿಕ್ಲೇರ್ ಮಾಡಿದ್ದೇವೆ ಎಂದರು.

ಈ ಬಗ್ಗೆ ಸಂಬಂಧಪಟ್ಟ ಎಂಬೆಸ್ಸಿಗಳಿಗೆ ಕೂಡ ಮಾಹಿತಿ ನೀಡಲಾಗಿದೆ. ಅನೇಕ ಮಂದಿ ವಿದೇಶಿ ವಿದ್ಯಾರ್ಥಿಗಳು ವೀಸಾ ಪಡೆದು ಇಲ್ಲಿಗೆ ಬರುತ್ತಿದ್ದಾರೆ. ವೀಸಾ ಅವಧಿ ಮುಗಿದರೂ ಇಲ್ಲಿಯೇ ಇರುತ್ತಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.