ಮನೆ ಕಾನೂನು ಡ್ರಂಕ್ ಡ್ರೈವ್: ಬೆಂಗಳೂರಿನ 118 ಶಾಲಾ ಬಸ್ ಚಾಲಕರ ವಿರುದ್ಧ ಕೇಸ್​, ಪರವಾನಗಿ ರದ್ದು

ಡ್ರಂಕ್ ಡ್ರೈವ್: ಬೆಂಗಳೂರಿನ 118 ಶಾಲಾ ಬಸ್ ಚಾಲಕರ ವಿರುದ್ಧ ಕೇಸ್​, ಪರವಾನಗಿ ರದ್ದು

0

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 118 ಶಾಲಾ ವಾಹನ ಚಾಲಕರ ವಿರುದ್ಧ ಡ್ರಂಕ್​ & ಡ್ರೈವ್ ಕೇಸ್ ದಾಖಲಾಗಿದ್ದು, ಚಾಲಕರ ವಾಹನ ಚಾಲನೆ ಪರವಾನಿಗಿ (ಲೈಸನ್ಸ್​) ರದ್ದುಪಡಿಸಲಾಗಿದೆ.

Join Our Whatsapp Group

ಜನವರಿಯಲ್ಲಿ 16​, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್​ನಲ್ಲಿ 26, ಸೆಪ್ಟೆಂಬರ್​ನಲ್ಲಿ 22, ನವೆಂಬರ್​ನಲ್ಲಿ 24 ಪ್ರಕರಣ ದಾಖಲಾಗಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಕಳೆದ 10 ತಿಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ನಿಯಮ ಮೀರಿ ಬಸ್​ನಲ್ಲಿ ಹೆಚ್ಚುವರಿ ಶಾಲಾ ಮಕ್ಕಳ ಸಾಗಾಟ ಮಾಡಿದ್ದು ಕೂಡ ತಿಳಿದು ಬಂದಿದೆ. ಈ ಕುರಿತು ಪ್ರಕರಣ ​ದಾಖಲಾಗಿದೆ.

ಕಾಂಟ್ರ್ಯಾಕ್ಟ್ ಶಾಲಾ ವಾಹನಗಳ ಚಾಲಕರಿಂದಲೇ ಹೆಚ್ಚು ರೂಲ್ಸ್​ ಬ್ರೇಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀರು ಆಯಾ ಶಾಲಾ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

1 ವಾರದಲ್ಲಿ 794 ಕೇಸ್​

ಬೆಂಗಳೂರು ನಗರ ಸಂಚಾರಿ ಪೊಲೀಸರು ನವೆಂಬರ್​ 4 ರಿಂದ 10ರವರೆಗೆ ಮದ್ಯಪಾನಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರುಗಳ ವಿರುದ್ಧ ಮತ್ತು ಅತಿವೇಗ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಗರದ 50 ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದಾರೆ.