ಬೆಂಗಳೂರು: ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಿ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ.
ಕೊಲೆ ಆರೋಪಿಗಳಾದ ಗಿರೀಶ್, ಶಂಕರ್ ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರದ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಿ, ಗಿರೀಶ್ ನನ್ನು ಪದೇಪದೆ ರೇಗಿಸುತ್ತಿದ್ದ. ಅಂಗವಿಕಲನಾಗಿದ್ದ ಗಿರೀಶ್ ಗೆ ಇದು ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿಜಿ ತನಗೆ ಕುಂಟ ಎಂದು ರೇಗಿಸುತ್ತಿದ್ದದ್ದು ಕೋಪ ತರಿಸುತ್ತಿತ್ತು. ಹೀಗಾಗಿ ನಿನ್ನೆ(ಜೂನ್ 21) ರಾತ್ರಿ ಬಾರ್ ಕ್ಲೋಸ್ ಆದ ನಂತರ ಇವರ ನಡುವೆ ಗಲಾಟೆ ಶುರುವಾಗಿತ್ತು.
ಈ ಗಲಾಟೆ ಬೇರೆ ರೀತಿಯ ತಿರುವು ಪಡೆದುಕೊಂಡಿದ್ದು ವಿಜಿಯನ್ನು ಗಿರೀಶ್ ಹಾಗೂ ಶಂಕರ್ ಸೇರಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.