ಮನೆ ಆರೋಗ್ಯ ಒಣ ಶುಂಠಿ ನಮ್ಮ ಆರೋಗ್ಯದ ಬಂಧು

ಒಣ ಶುಂಠಿ ನಮ್ಮ ಆರೋಗ್ಯದ ಬಂಧು

0

ನಮಗೆ ಸಣ್ಣ ಪುಟ್ಟ ನೆಗಡಿ, ಕೆಮ್ಮು, ಜ್ವರ ಬಂದಂತಹ ಸಂದರ್ಭದಲ್ಲಿ ಆದಷ್ಟು ಬೇಗನೆ ಮಾತ್ರ ತೆಗೆದುಕೊಂಡು ಸರಿ ಮಾಡಿಕೊಂಡು ಬಿಡುತ್ತೇವೆ. ಆದರೆ ಮನಸ್ಸು ಎಲ್ಲೋ ಒಂದು ಕಡೆ ಮನೆಮದ್ದು ಪ್ರಯೋಗಿಸಬಹುದಾಗಿತ್ತಲ್ಲ ಎಂದು ಹೇಳುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನೆನಪಿಗೆ ಬರುವುದು ಶುಂಠಿ. ಏಕೆಂದರೆ ಇದು ಉಷ್ಣ ಪದಾರ್ಥ. ಕೋಲ್ಡ್ ಆಗಿದ್ದರೆ ಸರಿಪಡಿ ಸುತ್ತದೆ ಎನ್ನುವ ಭರವಸೆ. ಸಿಂಪಲ್ ಟೆಕ್ನಿಕ್ ಅಷ್ಟೇ. ಆದರೆ ಇಲ್ಲೊಂದು ತಿರುವಿದೆ. ಡಾ. ರೇಖಾ ಹುಷಾರಿಲ್ಲದ ಸಮಯದಲ್ಲಿ ಹಸಿ ಶುಂಠಿ ಬದಲು ಒಣ ಶುಂಠಿ ಸೇವನೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ.

ವಾತ ಕಡಿಮೆಯಾಗುತ್ತದೆ

ಆರೋಗ್ಯ ತಜ್ಞರ ಪ್ರಕಾರ ಹಸಿ ಶುಂಠಿ ಮನುಷ್ಯನ ದೇಹದಲ್ಲಿ ವಾತ ಹೆಚ್ಚುವಂತೆ ಮಾಡುತ್ತದಂತೆ, ಆದರೆ ಒಣ ಶುಂಠಿ ಇದನ್ನು ಸಮತೋಲನ ಮಾಡುತ್ತದೆ. ಹಾಗಾಗಿ ಗ್ಯಾಸ್ಟ್ರಿಕ್ ಸಂದರ್ಭ ದಲ್ಲಿಅಥವಾ ಹೊಟ್ಟೆ ಉಬ್ಬರ ಬಂದಾಗ ಹಸಿ ಶುಂಠಿ ಹಾಕಿ ಶುಂಠಿ ಚಹಾ ಮಾಡಿಕೊಂಡು ಕುಡಿಯಬೇಡಿ. ಅದರ ಬದಲು ಒಣ ಶುಂಠಿ ನೀರಿನಲ್ಲಿ ಹಾಕಿ ಕುದಿಸಿ ಅದರ ಸಾರ ಸೇವಿಸಿ.

ಶೀತ, ಕೆಮ್ಮು, ಅಜೀರ್ಣ, ಇನ್ನೂ ನಾನಾ ಸಮಸ್ಯೆಗಳಿಗೆ ಒಣ ಶುಂಠಿ ರಾಮಬಾಣ

ಮಲಬದ್ಧತೆಗೆ ರಾಮಬಾಣ

• ಮಲಬದ್ಧತೆ ಸಮಸ್ಯೆ ಇರುವವರು ಮತ್ತು ಪದೇ ಪದೇ ಇಂತಹ ತೊಂದರೆಗೆ ಗುರಿಯಾಗುತ್ತಿರುವ ಜನರು ಒಣಶುಂಠಿಯನ್ನು ತಮ್ಮ ಆಹಾರ ಪದಾರ್ಥಗಳಲ್ಲಿ ಉಪಯೋಗಿಸಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

• ಅದರಲ್ಲೂ ಬೆಳಗಿನ ಸಮಯದಲ್ಲಿ ಮೋಷನ್ ಗೆ ಹೋಗಲು ಕಷ್ಟ ಪಡುತ್ತಿರುವ ಪುರುಷರು ಮತ್ತು ಮಹಿಳೆಯರು ಒಣಶುಂಟಿ ನೀರನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡ ಬೇಕು.

ಒಣ ಶುಂಠಿ ಒಣಗುವುದಿಲ್ಲ!

• ಹಸಿ ಶುಂಠಿ ನಿಮಗೆಲ್ಲ ಗೊತ್ತಿರುವ ಹಾಗೆ ನಾವು ಸರಿಯಾಗಿ ನಿರ್ವಹಣೆ ಮಾಡದೆ ಹೋದರೆ ಅದು ಕೊಳೆತು ಹೋಗುತ್ತದೆ. ಹಾಗಾಗಿ ಇದನ್ನು ಆದಷ್ಟು ಬೇಗನೆ ಬಳಸಿ ಬಿಡಬೇಕು. ಆದರೆ ಒಣಶುಂಠಿ ಹಾಗಲ್ಲ.

• ನಾವು ಹಸಿಶುಂಠಿಯನ್ನು ಮನೆಯಲ್ಲಿ ತಂದಿಟ್ಟು ಒಣಗಿಸಿ ಇಡೀ ವರ್ಷ ಬೇಕಾದರೂ ಬಳಸಬಹುದು. ಒಣಗಿದ ಎನ್ನುವ ಕಾರಣಕ್ಕೆ ಅದರಲ್ಲಿರುವ ಆರೋಗ್ಯ ಪ್ರಯೋಜನಗಳು ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ.

ಕಫ ಕರಗಿಸುತ್ತದೆ

• ನೆಗಡಿ ಬಂದಂತಹ ಸಂದರ್ಭದಲ್ಲಿ ಅಥವಾ ಕೋಲ್ಡ್ ಆಗಿದ್ದರೆ, ಅಂತಹ ಸಂದರ್ಭದಲ್ಲಿ ನಾವು ಹಸಿ ಶುಂಠಿಯ ಬಳಕೆ ಮಾಡಿಕೊಂಡು ಚಹಾ ತಯಾರಿಸಿ ಕುಡಿಯುವುದು ಅಥವಾ ಆಹಾರ ಪದಾರ್ಥ ಗಳಲ್ಲಿ ಹಸಿ ಶುಂಠಿ ಬಳಕೆ ಮಾಡುವುದರಿಂದ ಕಫ ಮತ್ತಷ್ಟು ಹೆಚ್ಚುತ್ತದೆ ಎನ್ನುವುದು ನಮಗೆ ತಿಳಿಯದ ಸತ್ಯ.

• ಆದರೆ ಈ ಸಂದರ್ಭದಲ್ಲಿ ಒಣಶುಂಠಿಯನ್ನು ಬಳಸುವುದರಿಂದ ಸಾಕಷ್ಟು ಬೇಗನೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಮತ್ತು ಉಸಿರಾಟದ ತೊಂದರೆ ಪರಿಹಾರವಾಗುತ್ತದೆ.

ಒಣ ಶುಂಠಿ ಬಳಕೆ ಹೇಗೆ?

ಒಲೆಯ ಮೇಲೆ ಎರಡು ಲೋಟ ನೀರನ್ನು ಕುದಿಯಲು ಇಟ್ಟು, ಅದಕ್ಕೆ ಒಂದು ಇಂಚು ಒಣ ಶುಂಠಿ ಹಾಕಿ ನೀರು ಅರ್ಧಕ್ಕೆ ಕಡಿಮೆಯಾಗುವವರೆಗೆ ಚೆನ್ನಾಗಿ ಕುದಿಸಿ. ನಂತರ ಇದನ್ನು ಆರಿಸಿ ಕುಡಿಯಿರಿ.