ನವದೆಹಲಿ : ದೆಹಲಿಯ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಈಗ ಅವರ ವಾಟ್ಸಾಪ್ ಚಾಟ್ಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ವಿದ್ಯಾರ್ಥಿನಿಗೆ ಕಳುಹಿಸಿರುವ ಚಾಟ್ನಲ್ಲಿ ದುಬೈ ಶೇಖ್ಗೆ ಸೆಕ್ಸ್ ಪಾರ್ಟ್ನರ್ ಬೇಕಂತೆ ಎಂದು ಕೇಳಿರುವುದು ತಿಳಿದುಬಂದಿದೆ.
ಸ್ವಾಮಿಯ ಚಾಟ್ ಹೀಗಿತ್ತು ಸ್ವಾಮಿ-ಒಬ್ಬ ದುಬೈ ಶೇಖ್ ಒಳ್ಳೆಯ ಲೈಂಗಿಕ ಸಂಗಾತಿಯನ್ನು ಬಯಸುತ್ತಿದ್ದಾನೆ ನಿನಗೆ ಯಾರಾದರೂ ಒಳ್ಳೆಯ ಸ್ನೇಹಿತರಿದ್ದಾರಾ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ವಿದ್ಯಾರ್ಥಿನಿ, ಇಲ್ಲ ಯಾರೂ ಇಲ್ಲ ಎಂದು ಉತ್ತರಿಸಿದ್ದಳು. ಅದಕ್ಕೆ ಸ್ವಾಮಿ ಅದು ಹೇಗೆ ಸಾಧ್ಯ, ನಿನ್ನ ಸಹಪಾಠಿ ಅಥವಾ ಜ್ಯೂನಿಯರ್ ಯಾರೂ ಇಲ್ವಾ ಎಂದು ಪ್ರಶ್ನಿಸಿದ್ದರು.
ಹೀಗೆ ಹತ್ತು ಹಲವು ಚಾಟ್ಗಳು ಸಿಕ್ಕಿವೆ, ಅದರಲ್ಲಿ ಸ್ವೀಟಿ, ಬೇಬಿ ಎಂದು ಕರೆದಿರುವುದು ಕಂಡು ಬಂದಿದೆ. ಈ ರೀತಿಯ ಪದಗಳನ್ನು ಬಳಸಿ ನಿರಂತರ ಸಂದೇಶಗಳನ್ನು ಅವರು ಕಳುಹಿಸುತ್ತಿದ್ದರು. ಬೇಬಿ ನೀನು ಎಲ್ಲಿದ್ದೀಯಾ, ಗುಡ್ ಮಾರ್ನಿಂಗ್ ಬೇಬಿ, ನಮ್ಮ ಮೇಲೆ ನಿನಗೆ ಯಾಕೆ ಕೋಪ? ಹೀಗೆ ಹತ್ತು ಹಲವು ಸಂದೇಶಗಳನ್ನು ವಿದ್ಯಾರ್ಥಿನಿಯರಿಗೆ ಕಳುಹಿಸಲಾಗುತ್ತಿತ್ತು.
ಕನಿಷ್ಠ 17 ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ 62 ವರ್ಷದ ಚೈತನ್ಯಾನಂದ ಸರಸ್ವತಿಯನ್ನು ಭಾನುವಾರ ಆಗ್ರಾದಲ್ಲಿ ಬಂಧಿಸಲಾಗಿತ್ತು. ಸುಮಾರು ಎರಡು ತಿಂಗಳಿನಿಂದ ಆತ ತಲೆಮರೆಸಿಕೊಂಡಿದ್ದ, ಆಗಾಗ ವೃಂದಾವನ, ಮಥುರಾ ಮತ್ತು ಆಗ್ರಾ ನಡುವೆ ಸ್ಥಳಾಂತರಗೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಸಣ್ಣ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು ಮತ್ತು ಟ್ಯಾಕ್ಸಿಗಳನ್ನು ಬಳಸುತ್ತಿದ್ದರು.
ಆಗ್ರಾದ ಹೋಟೆಲ್ನಲ್ಲಿ ಪಾರ್ಥಸಾರಥಿ ಎನ್ನುವ ಹೆಸರಿನಲ್ಲಿ ರೂಂ ಬುಕ್ ಮಾಡಿದ್ದರು. ಸೆಪ್ಟೆಂಬರ್ 27 ರಿಂದ ಕೊಠಡಿ 101 ರಲ್ಲಿ ವಾಸವಿದ್ದರು. ಸಿಕ್ಕಿಬೀಳುವ ಮೊದಲು ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಅವರು ಈಗ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಹದಿನೇಳು ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ಸರಸ್ವತಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ನೈಋತ್ಯ ದೆಹಲಿಯಲ್ಲಿರುವ ಅವರ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿಗೂ ಅವರನ್ನು ಕರೆದೊಯ್ಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 14 ರಂದು ಸಂತ್ರಸ್ತರಲ್ಲಿ ಒಬ್ಬರ ತಂದೆಗೆ ಬೆದರಿಕೆ ಕರೆ ಬಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಸಂಖ್ಯೆಯನ್ನು ಉತ್ತರಾಖಂಡದ ಹರಿ ಸಿಂಗ್ ಕೊಪ್ಕೋಟಿ (38) ಎಂದು ಗುರುತಿಸಲಾಗಿದ್ದು, ಆತನನ್ನು ಆತನ ಮನೆಯಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಗಿದೆ.
ಚೈತನ್ಯಾನಂದ ಸರಸ್ವತಿ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್ಗಳು ಸಿಕ್ಕಿವೆ. ಒಂದರಲ್ಲಿ ಅವರು ತಮ್ಮನ್ನು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪಿನಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ.















